ಮಂಗಳೂರು: ಎಡಕುಮೇರಿ ಮತ್ತು ಸಿರಿಬಾಗಿಲು ನಿಲ್ದಾಣಗಳ ನಡುವೆ ಸಂಭವಿಸಿರುವ ಭೂಕುಸಿತದ ಹಿನ್ನೆಲೆಯಲ್ಲಿ ಆ. 2ರಂದು ಕೆಲವು ರೈಲುಗಳ ಸಂಚಾರ ರದ್ದುಗೊಳಿಸಲಾಗಿದ್ದು, ಇನ್ನು ಕೆಲವು ರೈಲುಗಳ ಸಂಚಾರ ಸಂಚಾರ ಮಾರ್ಗ ಬದಲಾಯಿಸಲಾಗಿದೆ.

ರದ್ದುಗೊಂಡ ರೈಲುಗಳು: ಆ. 2ರಂದು ಮಂಗಳೂರು ಜಂಕ್ಷನ್ನಿಂದ ಹೊರಡಬೇಕಿದ್ದ ಮಂಗಳೂರು ಜಂಕ್ಷನ್-ಯಶವಂತಪುರ ಜಂಕ್ಷನ್ (16540) ಸಂಚಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿತ್ತು. ಆ.2ರಂದು ಯಶವಂತಪುರ ಜಂಕ್ಷನ್ನಿಂದ ಹೊರಡಬೇಕಿದ್ದ ಯಶವಂತಪುರ ಜಂಕ್ಷನ್ -ಮಂಗಳೂರು ಜಂಕ್ಷನ್ ಗೊಮ್ಮೆಟೇಶ್ವರ ಟ್ರೈ ವೀಕ್ಲಿ ಎಕ್ಸ್ಪ್ರೆಸ್ ಸಂಚಾರವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿತ್ತು.
ಕೆಎಸ್ಆರ್ ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್ಪ್ರೆಸ್ (16595) ರೈಲಿನ ಸಂಚಾರ ರದ್ದುಗೊಳಿಸಲಾಗಿತ್ತು. ಕಾರವಾರ-ಕೆಎಸ್ಆರ್ ಬೆಂಗಳೂರು ಪಂಚಗಂಗಾ ಎಕ್ಸ್ಪ್ರೆಸ್(16596) ಸಂಚಾರ ರದ್ದುಗೊಳಿಸಲಾಗಿತ್ತು. ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ಇತರ ರೈಲುಗಳು ಮಾರ್ಗ ಬದಲಾಯಿಸಿ ಸಂಚರಿಸಿದವು.
ಆ. 3ರಂದು ಹೊರಡಬೇಕಿದ್ದ ಯಶವಂತಪುರ- ಕಾರವಾರ ಟ್ರೈ ವೀಕ್ಲಿ ಎಕ್ಸ್ಪ್ರೆಸ್ (16515) ಹಾಗೂ ಮಂಗಳೂರು ಜಂಕ್ಷನ್- ಯಶವಂತಪುರ ಜಂಕ್ಷನ್ ಗೊಮ್ಮೆಟೇಶ್ವರ ಟ್ರೈ ವೀಕ್ಲಿ ಎಕ್ಸ್ಪ್ರೆಸ್ ಗಳ (16576) ಸಂಚಾರವನ್ನು ರದ್ದುಗೊಳಿಸಲಾಗಿದೆ.




