
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದ ಮಹಾಕುಂಭ ಮೇಳ ಮಹಾಶಿವರಾತ್ರಿಯಂದು ಮುಕ್ತಾಯಗೊಂಡಿದೆ. ಐಐಟಿ ಬಾಬಾ, ಮುಳ್ಳಿನ ಮೇಲೆ ಮಲಗಿದ ಬಾಬಾ ಸೇರಿದಂತೆ ಕುಂಭಮೇಳದಲ್ಲಿ ಭಾಗವಹಿಸಿದ್ದ ಒಂದಷ್ಟು ಸಾಧುಸಂತರ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಕುಂಭಮೇಳ ಮುಗಿದ ಬಳಿಕವೂ ಇಲ್ಲೊಂದು ಸಾಧುಗಳ ವಿಡಿಯೋ ವೈರಲ್ ಆಗಿದೆ. ಮಹಾಕುಂಭ ಮೇಳ ಮುಗಿದ ಬಳಿಕ ಒಂದಷ್ಟು ಸಾಧುಗಳು ಡೋಮಿನೋಸ್ಗೆ ಪಿಜ್ಜಾ ತಿನ್ನಲು ಬಂದಿದ್ದು, ಈ ದೃಶ್ಯವನ್ನು ಯುವತಿಯೊಬ್ಬಳು ವಿಡಿಯೋ ಮಾಡಿ ಹರಿಬಿಟ್ಟಿದ್ದಾಳೆ. ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಅವರನ್ನು ನೆಮ್ಮದಿಯಿಂದ ತಿನ್ನಲು ಬಿಡಿ ಯುವತಿಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಪ್ರಯಾಗ್ರಾಜ್ನಲ್ಲಿರುವ ಡೋಮಿನೋಸ್ ಔಟ್ಲೇಟ್ಗೆ ಮೂವರು ಸಾಧುಗಳು ಪಿಜ್ಜಾ ತಿನ್ನಲು ಬಂದಿದ್ದ ಸಂದರ್ಭದಲ್ಲಿ ಯುವತಿಯೊಬ್ಬಳು ಅದನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟಿದ್ದಾಳೆ.




