ಉಡುಪಿ: ಹಳೆಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಘಟನೆ
ಉಡುಪಿ: ನಾಸಿಕ್ ಮೂಲದ 29 ವರ್ಷದ ಕಾವ್ಯಾ ಹಾಗೂ ಅವರ ಮೂರು ವರ್ಷದ ಮಗ ಶಿವಾಂಶ್ ಉಡುಪಿಯ ಹಳೆಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ನಾಪತ್ತೆಯಾಗಿದ್ದಾರೆ.
ಅಕ್ಟೋಬರ್ 23ರಂದು ಬೆಳಗ್ಗೆ ಸುಮಾರು 8.30ಕ್ಕೆ ಕಾವ್ಯಾ ಅವರು ಸಂಬಂಧಿಕರೊಂದಿಗೆ ಉಡುಪಿಗೆ ಬಂದಿದ್ದರು. ಅಲ್ಲಿಂದ ಆಟೋದಲ್ಲಿ ಹಳೆಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ತೆರಳಿ, ತಮ್ಮ ಪತಿಯ ಮನೆಗೆ ಹೋಗಲು ಸಿದ್ಧತೆ ನಡೆಸಿದ್ದರು.
ಈ ವೇಳೆ ಕಾವ್ಯಾ ಅವರು ತಿಂಡಿ ಅಥವಾ ಚಹಾ ಸೇವಿಸಲು ನಿರಾಕರಿಸಿ, ತಾವು ಅಲ್ಲಿಯೇ ಇರುವುದಾಗಿ ಸಂಬಂಧಿಕರಿಗೆ ತಿಳಿಸಿದ್ದಾರೆ. ಬಳಿಕ ಸಂಬಂಧಿಕರು ತಿಂಡಿ ತಿನ್ನಲು ಹೋಟೆಲ್ಗೆ ತೆರಳಿದ್ದರು. ಬೆಳಗ್ಗೆ ಸುಮಾರು 9.15ಕ್ಕೆ ವಾಪಸ್ ಬಂದಾಗ ಕಾವ್ಯಾ ಹಾಗೂ ಅವರ ಮಗ ಕಾಣೆಯಾಗಿದ್ದರು.
ಸಂಬಂಧಿಕರು ಸುತ್ತಮುತ್ತ ಹುಡುಕಾಟ ನಡೆಸಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಉಡುಪಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಾಯಿ ಮತ್ತು ಮಗನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಮಹಿಳೆಯ ಗುರುತು: ಕಾವ್ಯಾ ಅವರು ಸುಮಾರು 4 ಅಡಿ 10 ಇಂಚು ಎತ್ತರವಿದ್ದು, ಕಪ್ಪು ಕೂದಲು ಮತ್ತು ಮಧ್ಯಮ ಮೈಕಟ್ಟು ಹೊಂದಿದ್ದಾರೆ. ನಾಪತ್ತೆಯಾಗುವ ವೇಳೆ ಹೂವಿನ ವಿನ್ಯಾಸವಿರುವ ಹಳದಿ ಬಣ್ಣದ ಟಾಪ್ ಹಾಗೂ ನೀಲಿ ಜೀನ್ಸ್ ಧರಿಸಿದ್ದರು. ಕನ್ನಡ, ಹಿಂದಿ, ತುಳು ಮತ್ತು ಮರಾಠಿ ಭಾಷೆಗಳನ್ನು ಮಾತನಾಡುತ್ತಾರೆ.
ಮಾಹಿತಿ ಇದ್ದಲ್ಲಿ ಸಂಪರ್ಕಿಸಿ:
- ಉಡುಪಿ ನಗರ ಪೊಲೀಸ್ ಠಾಣೆ: 0820-2520444
- ಪೊಲೀಸ್ ನಿಯಂತ್ರಣ ಕೊಠಡಿ: 0820-2526444
- ಪೊಲೀಸ್ ಇನ್ಸ್ಪೆಕ್ಟರ್: 9480805408
- ಪೊಲೀಸ್ ಸಬ್ಇನ್ಸ್ಪೆಕ್ಟರ್: 9080805445




