
ಹಾಸನ : ಜಿಲ್ಲೆಯ ಅರಸೀಕೆರೆ ಪಟ್ಟಣದ ಸುಭಾಷ್ನಗರದಲ್ಲಿ ಇಂದು ಮುಂಜಾನೆ ಕಾರಿನ ಡೋರ್ ತೆಗೆದು 6.30 ಲಕ್ಷ ರೂಪಾಯಿ ನಗದು ಕದ್ದು ಕಳ್ಳರು ಪರಾರಿಯಾದ ಘಟನೆ ನಡೆದಿದೆ.

ತಮಿಳುನಾಡು ಮೂಲದ ಸುರೇಶ್ ಎಂಬುವರು ಕಳೆದ ಒಂಬತ್ತು ವರ್ಷಗಳಿಂದ ಅರಸೀಕೆರೆಯ ಎಪಿಎಂಸಿಯಲ್ಲಿ ಕೊಬ್ಬರಿ ವ್ಯಾಪಾರ ನಡೆಸುತ್ತಿದ್ದು, ಅರಸೀಕೆರೆಯ ಫೆಡರಲ್ ಬ್ಯಾಂಕ್ನಿಂದ 6.30 ಲಕ್ಷ ರೂಪಾಯಿ ನಗದನ್ನು ಡ್ರ ಮಾಡಿಕೊಂಡು, ಎಪಿಎಂಸಿಯಲ್ಲಿರುವ ತಮ್ಮ ಕೊಬ್ಬರಿ ಅಂಗಡಿಯ ಮುಂದೆ ಕಾರನ್ನು ನಿಲ್ಲಿಸಿ ಲಾಕ್ ಮಾಡದೆ ಅಂಗಡಿಯೊಳಗೆ ತೆರಳಿದ್ದರು ವಾಪಸ್ ಬಂದು ನೋಡಿದಾಗ ಕಾರಿನಲ್ಲಿಟ್ಟಿದ್ದ ಹಣ ಕಾಣೆಯಾಗಿತ್ತು.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ
ಹಣ ಕಳವಾಗಿರುವುದು ಗೊತ್ತಾಗಿದೆ.
ಘಟನೆಯ ಕುರಿತು ಅರಸೀಕೆರೆ ನಗರ ಪೊಲೀಸ್ ಠಾಣೆಗೆ ದೂರು ದಾಖಲಾಗಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ
ಕಳ್ಳರನ್ನು ಪತ್ತೆಹಚ್ಚಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.




