ಕೇರಳದಲ್ಲಿ ಒಂದೇ ಗುಂಡಿಯಲ್ಲಿ ಸಿಲುಕಿದ್ದ ಹುಲಿ, ನಾಯಿಯ ರಕ್ಷಣೆ

Share with

ಇಡುಕ್ಕಿ: ಕೇರಳ ಹಾಗೂ ತಮಿಳುನಾಡು ಗಡಿಯಲ್ಲಿನ ಮಯಿಲದುಂಪರೈ ಎಂಬಲ್ಲಿ 9 ಅಡಿ ಆಳದ ಗುಂಡಿಯೊಂದರೊಳಗೆ ನಾಯಿ ಮತ್ತು ಹುಲಿಯೆರಡೂ ಸಿಲುಕಿದ್ದು, ಅವನ್ನು ಅರಣ್ಯ ಇಲಾಖೆ ಭಾನುವಾರ ರಕ್ಷಿಸಿದೆ.

ನಾಯಿಯನ್ನು ಹುಲಿಯು ಬೆನ್ನಟ್ಟಿದ್ದ ವೇಳೆ ಇರಡೂ ಗುಂಡಿಯೊಳಗೆ ಬಿದ್ದಿವೆ ಎನ್ನಲಾಗಿದ್ದು, ಹುಲಿ ಹಾಗೂ ನಾಯಿ ಎರಡಕ್ಕೂ ಅರವಳಿಕೆ ಮದ್ದು ನೀಡಿ ಅವನ್ನು ಶಾಂತಗೊಳಿಸಿ ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.

ಎರಡೂ ಪ್ರಾಣಿಗಳು ಸುರಕ್ಷಿತವಾಗಿದ್ದು, ಯಾವುದೇ ಗಾಯಗಳಾಗಿಲ್ಲ. ಇನ್ನು ರಕ್ಷಣೆಯ ಬಳಿಕ ಹುಲಿಯನ್ನು ಪೆರಿಯಾ‌ರ್ ಪ್ರಾಣಿಧಾಮಕ್ಕೆ ಕಳುಹಿಸಲಾಗಿದೆ.


Share with

Leave a Reply

Your email address will not be published. Required fields are marked *