ಬೆಂಗಳೂರು : HD ಕುಮಾರಸ್ವಾಮಿ ಮತ್ತೊಮ್ಮೆ CM ಆಗಬೇಕು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.


(ಜೂ.15)ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು, ರೈತ ವರ್ಗಕ್ಕೆ ಕುಮಾರಸ್ವಾಮಿ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ರೈತಾಪಿ ವರ್ಗಕ್ಕೆ 35 ಕೋಟಿ ರೂಪಾಯಿ ಯೋಜನೆಯನ್ನು ನೀಡಿದ್ದಾರೆ. ಪಂಚರತ್ನ ಯೋಜನೆ ಕನಸು ನನಸು ಆಗಬೇಕು. ಈ ಭ್ರಷ್ಟ ಸರ್ಕಾರ ತೊಲಗಬೇಕು, ಹೆಚ್ಡಿ ಕುಮಾರಸ್ವಾಮಿ ಮತ್ತೆ ಸಿಎಂ ಆಗಬೇಕು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.




