ಸಿಡಿಲು ಬಡಿದು ಬಿಜೆಪಿ ನಾಯಕನ ದುರಂತ ಅಂತ್ಯ..!

Share with

ಸಿಡಿಲು ಬಡಿದು ಬಿಜೆಪಿ ನಾಯಕರೊಬ್ಬರು ಮೃತಪಟ್ಟಿರುವ ಆಘಾತಕಾರಿ ಘಟನೆಯೊಂದು ಮಂಗಳವಾರ (ಜೂ.17) ನಡೆದಿದೆ.

ಮಥುರಾದ ಕೃಷ್ಣ ನಗರ ಪ್ರದೇಶದಲ್ಲಿ ಕೃಷ್ಣ ನಗರ ಬಿಜೆಪಿ ಮಂಡಲದ ವಲಯದ ಉಸ್ತುವಾರಿಯಾಗಿದ್ದ ಬಲರಾಮ್ ಸಿಂಗ್ (40) ಮೃತ ದುರ್ದೈವಿಯಾಗಿದ್ದಾರೆ.

ಮಂಗಳವಾರ ಸಂಜೆ ಕೃಷ್ಣ ನಗರ ಸುತ್ತ ಮುತ್ತ ಗುಡುಗು ಸಿಡಿಲು ಸಹಿತ ಭಾರೀ ಗಾಳಿ ಮಳೆಯಾಗಿದ್ದು ಈ ವೇಳೆ ಮನೆಯ ಟೆರೇಸ್ ಮೇಲೆ ಸಂಗ್ರಹವಾದ ಮಳೆಯ ನೀರನ್ನು ಹೊರಹಾಕಲು ಬಲರಾಮ್ ಸಿಂಗ್‌ ತೆರಳಿದ್ದ ವೇಳೆ ಸಿಡಿಲು ಬಡಿದಿದೆ, ಸಿಡಿಲು ಬಡಿಯುತ್ತಿದ್ದಂತೆ ಸಿಂಗ್ ಜೋರಾಗಿ ಕಿರುಚಿಕೊಂಡಿದ್ದಾರೆ, ಕಿರುಚಿದ ಸದ್ದು ಕೇಳಿ ಮನೆ ಮಂದಿ ಟೆರೇಸ್ ಮೇಲೆ ಹೋಗಿ ನೋಡಿದಾಗ ಬಲರಾಮ್ ಅವರು ಪ್ರಜ್ಞಾಹೀನರಾಗಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು ಈ ವೇಳೆ ಪರಿಶೀಲಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.


Share with

Leave a Reply

Your email address will not be published. Required fields are marked *