
ಮಂಜೇಶ್ವರ: ಪೊಸೋಟು ಬಳಿಯ ಚಾದಿಪಡ್ಪು ನಿವಾಸಿ ಹಿರಿಯ ಟೈಲರ್ ನಾರಾಯಣ[70] ನಿಧನರಾದರು. ಸೋಮವಾರ ರಾತ್ರಿ ಊಟ ಮಾಡಿ ಮಲಗಿದ್ದರು. ಮಂಗಳವಾರ ಬೆಳಿಗ್ಗೆ ಹೊತ್ತಾದರೂ ಎದ್ದೇಳಲಿಲ್ಲ ಈ ವೇಳೆ ಮನೆಯವರು ನೋಡಿದಾಗ ನಿಧನಹೊಂದಿದ್ದರು. ಹೃದಯಘಾತದಿಂದ ನಿಧನ ಹೊಂದಿರಬಹುದೆAದು ಅಂದಾಜಿಸಲಾಗಿದೆ. ಇವರು ಸುಮಾರು 50 ವರ್ಷಗಳಿಂದ ಟೈಲರ್ ವೃತ್ತಿಯನ್ನು ನಡೆಸುತ್ತಿದ್ದು, ಹೆಸರು ವಾಸಿಯಗಿದ್ದರು. ಆರಂಭದಲ್ಲಿ ಹೊಸಂಗಡಿ ಪೇಟೆಯಲ್ಲಿಹಾಗೂ ಇದೀಗ ಮನೆ ಸಮೀಪದಲ್ಲಿ ವೃತ್ತಿಯನ್ನು ಮಾಡುತ್ತಿದ್ದರು. ಮೃತರು ಪತ್ನಿ ಭಾರತಿ, ಸಹೋದರಿಯರಾದ ಕಲ್ಯಾಣಿ, ಯಶೋದ, ಭವಾನಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.




