ಮಂಗಳೂರು : ಅಡ್ಯಾರ್ ಕಣ್ಣೂರು ಗಾಣದಬೆಟ್ಟು ನಿವಾಸಿ ಮುಹಮ್ಮದ್ ಹಾಶೀರ್ (32) ರವರು ಜು.3ರಂದು ಬೆಳಿಗ್ಗೆ ಕೇರಳದ ವಯನಾಡ್ ನಲ್ಲಿ ಹೃದಯಾಘಾತದಿಂದ ನಿಧನರಾದರು.

ಕೇರಳದ ವಯನಾಡ್ ನಲ್ಲಿ ಇನ್ಫೋಸಿಸ್ ನ ಉದ್ಯೋಗಿಯಾಗಿದ್ದ ಮುಹಮ್ಮದ್ ಹಾಶೀರ್ ಅವರು ಮಂಗಳೂರಿನ ಪ್ರಕಾಶ್ ಬೀಡಿ ಉದ್ಯಮಿ G.B. ಹಸನಬ್ಬ ( G.B. ಬಾವ ) ಹಾಗೂ ಮುಲಾರಪಟ್ಟ ಮರ್ಹೂಮ್ ಹಸನ್ ಮುಸ್ಲಿಯಾರ್ ಅವರ ಮಗಳ ಹಿರಿಯ ಮಗ.
ಮೃತರು ಪತ್ನಿ, ಒಂದು ವರ್ಷದ ಹೆಣ್ಣು ಮಗು ಮತ್ತು ತಂದೆ ತಾಯಿಯ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.




