ಕುಂಬಳೆ: 350 ಗ್ರಾಂ ಗಾಂಜಾ ಸಹಿತ ಓರ್ವ ಯುವಕನ ಬಂಧನ; ಇನ್ನೋರ್ವ ಪರಾರಿ

Share with

ಕುಂಬಳೆ: 350 ಗ್ರಾಂ ಗಾಂಜಾ ಸಹಿತ ಓರ್ವ ಯುವಕನನ್ನು ಎಕ್ಸೆಸ್ ಅಧಿಕಾರಿಗಳು ಬಂಧಿಸಿದ್ದಾರೆ. ಕಡಂಬಾರು ಪಜಿಂಗಾರು ನಿವಾಸಿ ಅರುಣ್(21) ಬಂಧಿತ ಆರೋಪಿಯಾಗಿದ್ದು, ಎರಡನೇ ಆರೋಪಿ ಜೋಡುಕಲ್ಲು ಮುಡಂದೂರು ನಿವಾಸಿ ಬಿ.ಎಂ.ಅಬ್ದುಲ್ ಗಫೂರ್(33) ಪರಾರಿಯಾಗಿದ್ದಾನೆ.

ಕುಂಬಳೆ ಎಕ್ಸೆಸ್ ಇನ್ಸ್ಪೆಕ್ಟರ್ ಶ್ರವಣ ಅವರ ನೇತೃತ್ವದಲ್ಲಿ ಬೇಲೂರಿನಲ್ಲಿ ನಡೆಸಿದ ವಾಹನ ತಪಾಸಣೆಯ ವೇಳೆ ಗಾಂಜಾ ಸಹಿತ ಆರೋಪಿಯ ಬಂಧನ ನಡೆದಿದೆ. ಪರಾರಿಯಾದ ಆರೋಪಿ ಅಬ್ದುಲ್ ಗಫೂರ್, ಬಂದ್ಯೋಡು ಪರಿಸರಗಳಲ್ಲಿ ಗಾಂಜಾ ಪೂರೈಸುವ ಪ್ರಮುಖ ವ್ಯಕ್ತಿ ಎಂದು ತಿಳಿದು ಬಂದಿದೆ. ಈತನ ವಿರುದ್ಧ ಮಾದಕ ವಸ್ತು ಸಾಗಾಟದ ಹಲವು ಪ್ರಕರಣಗಳಿವೆ.

ಎಕ್ಸೆಸ್ ಅಧಿಕಾರಿಗಳಾದ ಕೆ.ವಿ.ಮನಾಸ್, ಎಂ.ಎಂ.ಅಖಿಲೇಶ್, ಕೆ.ಸುರ್ಜಿತ್, ಬಿಜಿಲ ಚಾಲಕ ಪ್ರವೀಣ್ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.


Share with

Leave a Reply

Your email address will not be published. Required fields are marked *