ಮಂಗಳೂರು : ಲಕುಮಿ ತಂಡದ ಕುಸಾಲ್ದ ಕಲಾವಿದೆರ್ ಅಭಿನಯಿಸುವ ಆಂಟೀ & ಅಂಕಲ್ ನಾಟಕದ ಶುಭಮುಹೂರ್ತ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಗುರುವಾರ ನಡೆಯಿತು.


ತಂಡದ ನಿರ್ಮಾಪಕ,ನಿರ್ದೇಶಕ ಕಿಶೋರ್ ಡಿ.ಶೆಟ್ಟಿ, ಕಲಾವಿದರಾದ ಅರವಿಂದ ಬೋಳಾರ್, ವಸಂತ ವಿ ಅಮೀನ್, ಗಿರೀಶ್ ಶೆಟ್ಟಿ, ದಿನೇಶ್ ಅತ್ತಾವರ್ ಮೊದಲಾದವರು ಪಾಲ್ಗೊಂಡಿದ್ದರು. ಬೋಳಾರ್ ಅವರ ಚಮತ್ಕಾರಿ ಅಭಿನಯದಲ್ಲಿ ಈ ವರ್ಷದ ನೂತನ ನಾಟಕ ಆಂಟೀ & ಅಂಕಲ್ ತಯಾರಾಗುತ್ತಿದೆ. ತುಳಸಿದಾಸ್ ರಚಿಸಿದ ನಾಟಕಕ್ಕೆ ವಸಂತ ವಿ.ಅಮೀನ್ ಸಾಹಿತ್ಯ ಬರೆದಿದ್ದಾರೆ. ನಾಗಾರ್ಜುನ್ ಮಂಗಲ್ಪಾಡಿ ಸಂಗೀತ ನೀಡಲಿದ್ದಾರೆ.




