ಕೊಪ್ಪಳ: ಎಲ್ಲಿ ಕೇಳಿದರೂ ಯೂರಿಯಾ ಗೊಬ್ಬರ ಸಿಗುತ್ತಿಲ್ಲ ಎಂದು ಆಕ್ರೋಶಗೊಂಡ ರೈತನೋರ್ವ ಮಣ್ಣು ತಿಂದು ಪ್ರತಿಭಟಿಸಿದ ಘಟನೆ ಶನಿವಾರ (ಜು.26) ನಡೆದಿದೆ.

ಕೊಪ್ಪಳ ತಾಲೂಕಿನ ಕುಣಕೇರಿ ತಾಂಡಾದ ಚಂದ್ರಪ್ಪ ಬಡಗಿ ಅವರು ಕೊಪ್ಪಳದ ಗಂಜ್ ವೃತ್ತದ ಬಳಿ ಇರುವ ತಾಲೂಕು ಒಕ್ಕುಲತನ ಹುಟ್ಟುವಳಿ ಸಮಿತಿ ಗೋದಾಮಿನ ಮುಂದೆ ಆಕ್ರೋಶ ಹೊರಹಾಕಿದ್ದಾರೆ.
ಎಲ್ಲಿ ಕೇಳಿದರೂ ಯೂರಿಯಾ ಗೊಬ್ಬರ ಸಿಗುತ್ತಿಲ್ಲ, ಗೊಬ್ಬರದ ಅಂಗಡಿ ಮುಂದೆ ನೋ ಸ್ಟಾಕ್ ಬೋರ್ಡ್ ಎಂದು ಬೋರ್ಡ್ ಹಾಕಿದೆ ಎಂದು ರೈತ ಸಿಟ್ಟಾಗಿದ್ದಾರೆ.
ನಮ್ಮ ಹೊಲಕ್ಕೆ ಗೊಬ್ಬರ ಸಿಗುತ್ತಿಲ್ಲ. ನಾವೇನು ಮಣ್ಣು ತಿನ್ನಬೇಕಾ ಎಂದು ಆಕ್ರೋಶ ಹೊರ ಹಾಕಿದ್ದಾರೆ. ನೆಲದಲ್ಲಿನ ಮಣ್ಣು ತಗೆದುಕೊಂಡು ತಿಂದ ರೈತ ಪ್ರತಿಭಟನೆ ನಡೆಸಿದ್ದಾರೆ.




