ಯುವಕರು ರಾಹುಲ್ ಗಾಂಧಿಯವರ ಜೊತೆ ಸೈನಿಕರಾಗಿ ಕೆಲಸ ಮಾಡಬೇಕು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ಕರೆ ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ತೋರಿಕೆಗೆ ಮಾತ್ರ ದೇಶ ಭಕ್ತಿಯ ಹೆಸರಿನಲ್ಲಿ ಬಿಜೆಪಿ ಯುವಕರನ್ನು ವಂಚಿಸುವ ಕೆಲಸ ಮಾಡುತ್ತಿದೆ. ನಮ್ಮ ನಾಯಕ ರಾಹುಲ್ ಗಾಂಧಿಯವರ ಆದರ್ಶ ಎಲ್ಲಾ ಯುವಕರಿಗೆ ಮಾರ್ಗದರ್ಶಿ ಆಗಬೇಕು.

ಚುನಾವಣೆ ಮಾತ್ರ ನಮ್ಮ ರಾಜಕೀಯ ಗುರಿಯಾಗಿರಬಾರದು. ಒಂದು ಗುರಿಯನ್ನು ಇಟ್ಟುಕೊಂಡು ರಾಜಕೀಯಕ್ಕೆ ಬರಬೇಕು ಎಂದು ಹೇಳಿದ್ದಾರೆ.




