Udupi: ಸರಣಿ ಮನೆಗಳ್ಳತನ..; ಅಂತಾರಾಜ್ಯ ಕಳ್ಳ ಮೊಹಮ್ಮದ್ ಆಸಿಫ್ ಬಂಧನ

Share with

ಉಡುಪಿ: ತಿಂಗಳ ಹಿಂದೆ ಪುತ್ತೂರು ಗ್ರಾಮದ ಕೊಡಂಕೂರು ನ್ಯೂ ಕಾಲನಿಯಲ್ಲಿ ನಡೆದ ಸರಣಿ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಅಂತಾರಾಜ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಿವಾಸಿ ಮೊಹಮ್ಮದ್ ಆಸೀಫ್ ಬೆಟಗೇರಿ (28) ಬಂಧಿತ. ಜುಲೈ 5 ರಂದು ಉಡುಪಿ ನಗರ ಠಾಣಾ ವ್ಯಾಪ್ತಿಯ ಕೊಡಂಕೂರು ನ್ಯೂ ಕಾಲೋನಿಯಲ್ಲಿ ಮಧ್ಯರಾತ್ರಿ 3 ಮನೆಗಳಲ್ಲಿ ಕಳ್ಳತನವಾದ ಬಗ್ಗೆ ಪ್ರಕರಣ ದಾಖಲಾಗಿತ್ತು.

ವಿಚಾರಣೆ ವೇಳೆ ಮೊಹಮ್ಮದ್ ಆಸೀಫ್ ತನ್ನ ಸಹಚರರೊಂದಿಗೆ ಸೇರಿ ವಾಹನದಲ್ಲಿ ಬಂದು ಮಧ್ಯರಾತ್ರಿ ಕೊಡಂಕೂರಿನಲ್ಲಿ 3 ಮನೆಗಳ ಬೀಗವನ್ನು ಮುರಿದು ವ ಚಿನ್ನಾಭರಣ ಮತ್ತು ನಗದನ್ನು ಕಳ್ಳತನ ಮಾಡಿ ಭಟ್ಕಳ ಹಾಗೂ ಶಿರಸಿಯಲ್ಲಿ ಮಾರಾಟ ಮಾಡಿ ಹಣವನ್ನು ಪಡೆದಿರುವುದಾಗಿ ಹೇಳಿದ್ದಾನೆ.ಆರೋಪಿಯನ್ನು ನ್ಯಾಯಲಯಕ್ಕೆ ಹಾಜರುಪಡಿಸಲಾಗಿದೆ.

ಆರೋಪಿ ನೀಡಿದ ಮಾಹಿತಿಯಂತೆ ಭಟ್ಕಳ ಹಾಗೂ ಶಿರಸಿ ನಗರದಲ್ಲಿ ಕಳವು ಮಾಡಿ ವಿಲೇವಾರಿ ಮಾಡಿದ ಸುಮಾರು 8.50 ಲಕ್ಷ ಮೌಲ್ಯದ ಅಂದಾಜು 95.5 ಗ್ರಾಂ ಚಿನ್ನಾಭರಣ 255 ಗ್ರಾಂ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿ ಸಾಗರ ಟೌನ್ ಪೊಲೀಸ್ ಠಾಣೆ, ನ್ಯಾಮತಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮನೆಕಳವು ಮಾಡಿರುವುದಾಗಿ ಹೇಳಿದ್ದು,ಗೋವಾದಲ್ಲಿ 4 ಪ್ರಕರಣಗಳು ಉತ್ತರ ಪ್ರದೇಶದಲ್ಲಿಯೂ ಕಳವು ಹಾಗೂ ಇತರ ಪ್ರಕರಣದಲ್ಲಿ ತಾನೂ ಹಾಗೂ ಸಹೋದರ ಆರೀಫ್, ಅನೀಸ್ ಹಾಗೂ ಸಂಬಂದಿ ಸಲೀಂ, ಶೋಯೆಬ್ ಸೇರಿರುವುದಾಗಿ ಒಪ್ಪಿಕೊಂಡಿದ್ದಾನೆ.

ಉಡುಪಿ ನಗರ ಠಾಣಾ ಪ್ರಕರಣದಲ್ಲಿ ಆರೋಪಿಗಳಾದ ಆಸೀಫ್ ನ ಸಹೋದರ ಆರೀಫ್ ಹಾಗೂ ಇತರರು ತಲೆಮರೆಸಿ ಕೊಂಡಿದ್ದು ಪತ್ತೆ ಕಾರ್ಯ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *