ನವದೆಹಲಿ: ಕಾಸರಗೋಡು ಜಿಲ್ಲೆಯ ಹಲವಾರು ಕಡೆ ಪಾದಚಾರಿಗಳಿಗೆ ರಸ್ತೆ ದಾಟಲು ಅನಾನುಕೂಲವಾಗುತ್ತಿದೆ. ಕಾಸರಗೋಡಿನ ಅಡ್ಕತ್ತಬೈಲ್,ಮಂಜೇಶ್ವರ ಭಾಗದ ಐಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಬಳಿ, ಕನಿಲ ಶ್ರೀ ಭಗವತಿ ಕ್ಷೇತ್ರದ ಬಳಿ, ಹಾಗೂ ಬoಗ್ರಮಂಜೇಶ್ವರದಲ್ಲಿ ಫೂಟ್ ಓವರ್ ಬ್ರಿಡ್ಜ್ (Foot over Bridge ) ನಿರ್ಮಿಸಲು ಬಿಜೆಪಿ ಕೋಜಿಕ್ಕೋಡು ವಲಯ ಉಪಾಧ್ಯಕ್ಷ ವಿಜಯ ರೈ ಅವರು ಕೇಂದ್ರ ಸಾರಿಗೆ ಸಚಿವರಾದ ನಿತೀನ್ ಗಡ್ಕರಿಯವರಿಗೆ ಮನವಿ ಸಲ್ಲಿಸಿದರು.

ದೆಹಲಿಯಲ್ಲಿ ಸಾರಿಗೆ ಸಚಿವರ ಕಚೇರಿಗೆ ತೆರಳಿ ಮನವಿಯನ್ನು ಸಲ್ಲಿಸಲಾಯಿತು. ಮಂಗಳೂರು ಸಂಸದರಾದ ಬ್ರಿಜೇಶ್ ಚೌಟ ಅವರು ಜತೆಯಲ್ಲಿದ್ದರು.




