ರಾಹುಲ್ ಗಾಂಧಿ ಮಾಡಿರುವ ಮತಗಳ್ಳತನ ಆರೋಪ ಇದೀಗ ಸಿದ್ದರಾಮಯ್ಯರ ಬುಡಕ್ಕೆ ಬಂದಿದೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಲ್ಲಿ 3,000 ಮತ ಖರೀದಿಸಿದ್ದರಿಂದ ಸಿದ್ದರಾಮಯ್ಯ ಗೆದ್ದದ್ದು ಎಂದು C.M. ಇಬ್ರಾಹಿಂ ಹೇಳಿದ್ದರು.

ಇನ್ನು ಕಳೆದ ಲೋಕಸಭಾ ಚುನಾವಣೆ ವೇಳೆ ಹಾಸನ ಕ್ಷೇತ್ರದಲ್ಲಿ 7 ಕೋಟಿ ರೂ. ಹಂಚಿಕೆ ಕುರಿತು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹೇಳಿಕೆ ನೀಡಿದ್ದರು. ಇದೀಗ ಈ ಎರಡೂ ಹೇಳಿಕೆಗಳನ್ನು ಆಧರಿಸಿ ರಾಜ್ಯ BJP, ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.




