ಕರಾವಳಿಯಾದ್ಯಂತ “ಚೌತಿ” ಹಬ್ಬದ ಸಂಭ್ರಮ

Share with

ಮಂಗಳೂರು: ಕರಾವಳಿಯಾದ್ಯಂತದ ಹಬ್ಬದ ಸಂಭ್ರಮ ಮನೆ ಮಾಡಿದೆ. ಮಂಗಳವಾರ(ನಿನ್ನೆ) ಬೆಳಗ್ಗಿನಿಂದಲೇ ಪೇಟೆಯಲ್ಲಿ ಜನ ಜಂಗುಳಿ ಇತ್ತು. ಜನರು ಹೂವು, ಹಣ್ಣು, ಕಬ್ಬು ಖರೀದಿಯಲ್ಲಿ ತೊಡಗಿದ್ದರು.

ಅಪರಾಹ್ನದ ಬಳಿಕ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧೆಡೆ ಮಳೆ ಸುರಿದಿದ್ದರಿಂದ ಜನರ ಖರೀದಿ ಸಂಭ್ರಮಕ್ಕೆ ಅಡ್ಡಿಯಾಯಿತು.

ಸಾರ್ವಜನಿಕ ಗಣೇಶೋತ್ಸವಗಳಿಗೂ ಎಲ್ಲೆಡೆ ಸಿದ್ಧತೆ ನಡೆದಿದ್ದು, ಪೆಂಡಾಲ್‌ನ ಅಲಂಕಾರ ಕಾರ್ಯ ಪೂರ್ಣಗೊಂಡಿದೆ. ಕೆಲವೆಡೆ ಸಂಜೆಯೇ ಗಣಪತಿ ಮೂರ್ತಿಯನ್ನು ತಂದಿರಿಸಿದರೆ, ಇನ್ನು ಕೆಲವೆಡೆ ಇಂದು ಬೆಳಗ್ಗೆ ತಂದು ಪ್ರತಿಷ್ಠಾಪನೆ ಮಾಡಿದ್ದಾರೆ. ಮಂಗಳವಾರ ಕರಾವಳಿಯ ಹೆಚ್ಚಿನ ದೇವಸ್ಥಾನಗಳಲ್ಲಿ ತೆನೆ ಹಬ್ಬ ನಡೆಯಿತು. ಸಾರ್ವಜನಿಕರು ಅಲ್ಲಿಂದ ತೆನೆಗಳನ್ನು ಪಡೆದರು.


Share with

Leave a Reply

Your email address will not be published. Required fields are marked *