ದೇವಸ್ಥಾನದ ಆನೆ ದಾಳಿ ನಡೆಸಿ ಓರ್ವ ಸಾವು

Share with

ಆಲಪ್ಪುಳ : ಕೇರಳದ ಕರಾವಳಿ ಜಿಲ್ಲೆಯ ಹರಿಪಾದ್‌ನಲ್ಲಿರುವ ದೇವಸ್ಥಾನದ ಆನೆ ಇಬ್ಬರು ಮಾವುತರ ಮೇಲೆ ದಾಳಿ ನಡೆಸಿದೆ. ಇದರ ಪರಿಣಾಮ ಒಬ್ಬರು ಮೃತಪಟ್ಟು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಸ್ಕಂದನ್ ಎಂಬ ಆನೆಗೆ ಮದವೇರಿತ್ತು. ಹೀಗಾಗಿ ದೇವಸ್ಥಾನದ ಅರ್ಚಕರ ಮನೆಯಲ್ಲಿ ಕಟ್ಟಿಹಾಕಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಮಧ್ಯಾಹ್ನ ಮದವೇರಿದ ಸ್ಕಂದನ್ ಆನೆ ಏಕಾಏಕಿ, ಸುನಿಲ್ ಕುಮಾರ್ ಎಂಬ ಮಾವುತನ ಮೇಲೆ ದಾಳಿ ನಡೆಸಿದೆ.

ದೇವಸ್ಥಾನಕ್ಕೆ ಸ್ಥಳಾಂತರಿಸುವಾಗ ಮತ್ತೆ ಕೋಪಗೊಂಡ ಸ್ಕಂದನ್, ನಿರ್ವಾಹಕ ಮುರಳೀಧರನ್ ಅವರ ಮೇಲೂ ಗಂಭೀರವಾಗಿ ದಾಳಿ ನಡೆಸಿತು.

ನಿರ್ವಾಹಕ ಮುರಳೀಧರನ್ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯದಲ್ಲೇ ಮೃತ ಪಟ್ಟಿದ್ದಾರೆ. ಗಾಯಳು ಸುನಿಲ್ ಕುಮಾರ್ ಸ್ಥಿತಿಯೂ ಗಂಭೀರವಾಗಿದೆ ಎಂದು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *