ಪುತ್ತೂರು: ಪುತ್ತೂರಿನ ಪಿಲಿ ಪರಂಪರೆಗೆ ತನ್ನದೇ ಆದ ಶೈಲಿಯಲ್ಲಿ ಹೆಗ್ಗುರುತು ಮೂಡಿಸಿದ್ದ ಪಿಲಿ ರಾಧಣ್ಣ (ರಾಧಾಕೃಷ್ಣ ಶೆಟ್ಟಿ, 59ವ) ಸೆಪ್ಟೆಂಬರ್ 6ರಂದು ನಸುಕಿನ ಜಾವ ಮಂಗಳೂರಿನಲ್ಲಿ ನಿಧನರಾದರು.
ಕೆಮ್ಮಾಯಿ ನಿವಾಸಿಯಾದ ಅವರು ಸೆ.5ರಂದು ಅನಾರೋಗ್ಯದಿಂದ ಪುತ್ತೂರಿನಲ್ಲಿ ಚಿಕಿತ್ಸೆ ಪಡೆದ ಬಳಿಕ ಮಂಗಳೂರಿಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದರು. ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಬಾಲ್ಯದಲ್ಲೇ ಕಿನ್ನಿ ಪಿಲಿಯಾಗಿ ಆರಂಭಿಸಿದ ರಾಧಣ್ಣ, ತಂದೆ ಪಿಲಿ ಸಂಕಪ್ಪ ಶೆಟ್ಟಿಯೊಂದಿಗೆ ಹತ್ತು ವರ್ಷಗಳ ಕಾಲ ಕುಣಿದು, ನಂತರ ಸ್ವತಂತ್ರವಾಗಿ “ಪಿಲಿ ರಾಧಣ್ಣ” ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದಿದ್ದರು.





