ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

Share with

ಕುಂಬಳೆ: ಕರ್ನಾಟಕದಲ್ಲಿ ಮಾತ್ರ ಮಾರಾಟಗೈಯ್ಯಬಹುದಾದ ಆರು ಲೀಟರ್ ಮದ್ಯ ಸಹಿತ ಓರ್ವನನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದಾರೆ.

ಪಚ್ಚಂಬಳದ ಕ್ವಾರ್ಟಸ್‌ ನಲ್ಲಿ ವಾಸಿಸುವ ಕಿರಣ್ ಕುಮಾರ್ ಎಚ್ (28) ಎಂಬಾತನನ್ನು ಸೆ.14ರಂದು ಸಂಜೆ ಹೇರೂರು ಚೋಕೆ ಎಂಬಲ್ಲಿಂದ ಮದ್ಯ ಸಹಿತ ಸೆರೆಹಿಡಿದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕುಂಬಳೆ ರೇಂಜ್ ಅಬಕಾರಿ ಕಚೇರಿಯ ಪ್ರಿವೆಂಟೀವ್ ಆಫೀಸರ್ ಮಾನಸ್ ಕೆ, ಸಿಇಒಗಳಾ ದ ಅಖಿಲೇಖ್ ಎಂ, ರಾಹುಲ್ ಇ, ಸೂರ್ಜಿತ್ ಕೆ, ಚಾಲಕ ಪ್ರವೀಣ್ ಕುಮಾರ್ ಎಂಬಿವರು ಕಾರ್ಯಾ ಚರಣೆ ನಡೆಸಿದ ತಂಡದಲ್ಲಿದ್ದರು.


Share with

Leave a Reply

Your email address will not be published. Required fields are marked *