ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ಸೋಮವಾರ ನಡೆದ ವಿಟ್ಲಪಿಂಡಿ ಲೀಲೋತ್ಸವ ಸಂಭ್ರಮದಲ್ಲಿ ಎಂದಿನಂತೆ ಹುಲಿವೇಷಗಳು ಸೇರಿ ನಾನಾ ವೇಷಗಳು ಜನರ ಗಮನ ಸೆಳೆದವು. ಎಲ್ಲಕ್ಕೂ ಮಿಗಿಲಾಗಿ ಭಕ್ತರೆಲ್ಲರೂ ಭಾರತದ ಕ್ರಿಕೆಟ್ ದಿಗ್ಗಜ, ಆರ್ ಸಿಬಿ ಸ್ಟಾರ್ ವಿರಾಟ್ ಕೊಹ್ಲಿ ಉಡುಪಿಗೆ ಬಂದಿದ್ದಾರಾ ಎಂದು ಒಂದು ಕ್ಷಣ ಕಣ್ಣುಜ್ಜಿಕೊಂಡು ನೋಡುವಂತಾಯಿತು.

ಅಬ್ಬರದ ನಡುವೆ ಈ ಬಾರಿ ವಿರಾಟ್ ಕೊಹ್ಲಿ, ಕ್ರಿಸ್ ಗೇಲ್ ಮತ್ತು ಮಿ ನ್ಯಾಗ್ಸ್ (ದಾನಿಶ್ ಸೇರ್) ಅವರ ಗೆಟಪ್ ನಲ್ಲಿ ಆರ್ ಸಿಬಿ ತಂಡದ ಜೆರ್ಸಿ ಧರಿಸಿದ್ದ ವೇಷಧಾರಿಗಳು ಎಲ್ಲರ ಗಮನ ಸೆಳೆದರು. ಥೇಟ್ ಕೊಹ್ಲಿ ಗೆಟಪ್ ನಲ್ಲಿದ್ದ ಯುವಕನ ಕಂಡು ನೆರೆದಿದ್ದ ಸಾವಿರಾರು ಮಂದಿ ಒಮ್ಮೆಗೆ ದಿಗ್ಗಜ ಕೊಹ್ಲಿ ಮಠಕ್ಕೆ ಬಂದಿದ್ದಾರಾ ಎಂದು ಪ್ರಶ್ನಿಸಿಕೊಂಡಿದ್ದಂತೂ ಸತ್ಯ!.




