ಮಂಗಳೂರು-ಸುಬ್ರಹ್ಮಣ್ಯ: ವಿದ್ಯುತ್ ಚಾಲಿತ ರೈಲು ಸಂಚಾರ ಆರಂಭ

Share with

ಸುಬ್ರಹ್ಮಣ್ಯ: ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಹಳಿ ವಿದ್ಯುದೀಕರಣ ಪ್ರಗತಿಯಲ್ಲಿದ್ದು, ಈಗಾಗಲೇ ಮಂಗಳೂರಿನಿಂದ ಶಿರಿಬಾಗಿಲುವಿನವರೆಗೆ ಕಾಮಗಾರಿ ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಇದೀಗ ಮಂಗಳೂರು-ಸುಬ್ರಹ್ಮಣ್ಯ ರೋಡ್ ರೈಲ್ವೇ ನಡುವೆ ವಿದ್ಯುತ್‌ಚಾಲಿತ ಲೋಕಲ್ ಪ್ಯಾಸೆಂಜ‌ರ್ ರೈಲು ಸೋಮವಾರದಿಂದ ಸಂಚಾರ ಆರಂಭಿಸಿದೆ.

ಈ ಭಾಗದ ಜನರ ಬಹು ವರ್ಷಗಳ ಬೇಡಿಕೆಯಂತೆ ಇತ್ತೀಚೆಗೆ ಆರಂಭಗೊಂಡಿರುವ ಮಂಗಳೂರು-ಸುಬ್ರಹ್ಮಣ್ಯ ರೋಡ್ ನಡುವಿನ ಪ್ಯಾಸೆಂಜ‌ರ್ ರೈಲಿಗೆ ಉತ್ತಮ ಸ್ಪಂಧನೆ ದೊರೆಯುತ್ತಿದ್ದು, ಇದೀಗ ಈ ಪ್ಯಾಸೆಂಜರ್ ರೈಲನ್ನು ವಿದ್ಯುತ್‌ಚಾಲಿತ ರೈಲನ್ನಾಗಿಸುವ ಮೂಲಕ ಹಸಿರು ಮತ್ತು ವಿದ್ಯುತ್‌ಮಯ ಮಾರ್ಗದತ್ತ ಪ್ರಗತಿ ಹರಿಸಿದಂತಾಗಿದೆ.

ADVERTISEMENT

ಮಂಗಳೂರು-ಸುಬ್ರಹ್ಮಣ್ಯ ರೋಡ್ ನಡುವೆ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ಸಂಚರಿಸುವ ಲೋಕಲ್ ಪ್ಯಾಸೆಂಜ‌ರ್ ರೈಲು ವಿದ್ಯುತ್‌ಚಾಲಿತವಾಗಿ ಸಂಚರಿಸಲಿದೆ. ಲೋಕಲ್ ಪ್ಯಾಸೆಂಜರ್ ರೈಲು ರವಿವಾರ ರಾತ್ರಿ ಡೀಸೆಲ್ ಬಳಸಿ ತನ್ನ ಕೊನೆಯ ಸಂಚಾರವನ್ನು ಮಾಡಿತ್ತು. ಸೋಮವಾರ ಬೆಳಗ್ಗೆ ವಿದ್ಯುತ್‌ಚಾಲಿತ ಪ್ಯಾಸೆಂಜ‌ರ್ ರೈಲು ಮೊದಲ ಸಂಚಾರ ಮಾಡಿದೆ. ಇದಕ್ಕೂ ಮೊದಲು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಸುಬ್ರಹ್ಮಣ್ಯ ರೋಡ್‌ವರೆಗಿನ ಹಳಿ ವಿದ್ಯುದೀಕರಣ ಪೂರ್ಣಗೊಂಡು ಯಶ್ವಿಯಾಗಿ ಪರೀಕ್ಷಾ ಕಾರ್ಯ ನಡೆಸಲಾಗಿತ್ತು. ವಿದ್ಯುತ್‌ಚಾಲಿತ ಮೊದಲ ಪ್ಯಾಸೆಂಜ‌ರ್ ರೈಲಿಗೆ ಪುತ್ತೂರಿನಲ್ಲಿ ಸ್ವಾಗತ ಕೋರಲಾಯಿತು.

ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರೋಡ್ ನಡುವಿನ ಪ್ಯಾಸೆಂಜರ ರೈಲು ಡೀಸೆಲ್ ಎಂಜಿನ್‌ನಿಂದ ವಿದ್ಯುತ್‌ ಎಂಜಿನ್‌ಗೆ ಬದಲಾಗಿರುವುದು ಸಂತೋಷ ತಂದಿದೆ. ಇದಲ್ಲದೇ, ನಾವು ರೈಲ್ವೇ ಸಚಿವಾಲಯಕ್ಕೆ ಮನವಿ ಮಾಡಿರುವಂತೆ ಈ ರೈಲಿನ ಹಳೆಯ ರೇಕನ್ನು ಶೀಘ್ರದಲ್ಲಿ ಮೆಮು ರೇಕ್‌ನೊಂದಿಗೆ ಬದಲಾಯಿಸುವುದನ್ನೂ ನಾನು ಕಾತುರದಿಂದ ಎದುರು ನೋಡುತ್ತಿದ್ದೇನೆ. -ಕ್ಯಾ | ಬ್ರಿಜೇಶ್ ಚೌಟ, ಸಂಸದರು,


Share with

Leave a Reply

Your email address will not be published. Required fields are marked *