ಬಂಟ್ವಾಳ: ಕರ್ನಾಟಕ ಸಾವಯವ ಕೃಷಿ ಯೋಜನೆ ಮಂಗಳ ಕಿಸಾನ್ ಸಮೃದ್ಧಿ ವಿಭಾಗದ 2026ನೇ ಸಾಲಿನ ದ.ಕ, ಉಡುಪಿ, ಕಾಸರಗೋಡು ಒಳಗೊಂಡ ಮಂಗಳೂರು ವಿಭಾಗದ 150 ಕೃಷಿಕರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಕೃಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸೋಮವಾರ ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಿತು.

ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ, ಕೃಷಿ ಪ್ರಶಸ್ತಿಯನ್ನು ಪ್ರದಾನಗೈದರು. ಕರ್ನಾಟಕ ಸಾವಯವ ಕೃಷಿ ಯೋಜನೆಯ ಆಡಳಿತ * ನಿದೇರ್ಶಕ ಮೋಹನ್ ಗೌಡ ‘ಕಲ್ಮಂಜ ಅಧ್ಯಕ್ಷತೆ ವಹಿಸಿದ್ದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಪೂಜಾರಿ, ಕಸ್ತೂರಿರಂಗನ್ ಹೋರಾಟ ಸಮಿತಿ
ಸಂಚಾಲಕ ಕಿಶೋರ್ ಕುಮಾರ್ ಶಿರಾಡಿ, ಶಿರಾಡಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಬೆಳ್ತಂಗಡಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್, ಪಂಜಿಕಲ್ಲು, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, 2025 ಸಾಲಿನಲ್ಲಿ ಕೃಷಿ ಪ್ರಶಸ್ತಿ ಸನ್ಮಾನಿತರಾದ ಅಮ್ಮಣ್ಣ ರೈ, ಪುತ್ತೂರು, ಮಾಳ ವಿನೀತ್ ಹೆಗ್ಡೆ ಕಜಕಳಬೆಟ್ಟು ರಾಮ ಮೂರ್ತಿ ಕಲ್ಕೂರ್, ಲ್ಯಾನ್ಸಿ ಪಿರೇರಾ, ಪೊನ್ನಂಗಿಲ ಬಂಟ್ವಾಳ, ಅರಿಯಡ್ಕ ಪುತ್ತೂರು, ಹಿರಿಯ ಮುಖ್ಯಾಧಿಕಾರಿ ಭಾರತಿ ರೈ, ಕಾರ್ಕಳ ಹಿರಿಯ ಮುಖ್ಯಾಧಿ ಕಾರಿ ಶಾರದಾ ಶೆಟ್ಟಿ ಕಾಸರಗೋಡು ಜಿಲ್ಲಾ ಹಿರಿಯ ಅಧಿಕಾರಿಗಳು ಪೂರ್ಣಿಮಾ ಅಡೂರ್, ಯೋಜನೆಯ ಸಹ ಆಡಳಿತ ನಿರ್ದೇಶಕರಾದ ಅಶ್ವಿನಿ ಮೋಹನ್ ಕುಮಾರ್ ಉಪಸ್ಥಿತರಿದ್ದರು.




