ಬೆಂಗಳೂರು, ಅಕ್ಟೋಬರ್ 20: ಬೆಂಗಳೂರು ನಗರದಲ್ಲಿ ರಸ್ತೆ ಬದಿಯಲ್ಲಿ, ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಜಿಬಿಎ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಆನ್ಲೈನ್ ಆರ್ಡರ್ ಕವರ್ ಸಹಿತ ಎಲ್ಲೆಂದರಲ್ಲಿ ಎಸೆದ ಜನರ ಮನೆ ವಿಳಾಸವನ್ನು ಕವರ್ನಲ್ಲಿರುವ ವಿಳಾಸದಿಂದ ಪತ್ತೆಹಚ್ಚಿರುವ ಅಧಿಕಾರಿಗಳು, ಮನೆಗೆ ಬಂದು 500 ರಿಂದ 2 ಸಾವಿರ ರೂಪಾಯಿ ದಂಡ ವಸೂಲಿ ಮಾಡುತ್ತಿದ್ದಾರೆ. ಈ ಕ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರತಿದಿನ 20 ಕ್ಕೂ ಹೆಚ್ಚು ಮಂದಿಗೆ ಇಂತಹ ದಂಡ ವಿಧಿಸಲಾಗುತ್ತಿದೆ.





