ರಿದಮ್ ಕೀಪಾಜ್ ಡ್ಯಾನ್ಸ್ ಅಕಾಡೆಮಿಯ ದಶಮಾನೋತ್ಸವಕ್ಕೆ ಸಡಗರದ ಸಿದ್ಧತೆ.

Share with

ಸಕಲೇಶಪುರ: ‘ದಶ ಹೆಜ್ಜೆ’ ಅದ್ಧೂರಿ ನೃತ್ಯ ಕಾರ್ಯಕ್ರಮಕ್ಕೆ ಸಿದ್ಧತೆ.

ಸಕಲೇಶಪುರ ಮತ್ತು ಬಾಳುಪೇಟೆಯ ರಿದಮ್ ಕೀಪಾಜ್ ಡ್ಯಾನ್ಸ್ ಅಕಾಡೆಮಿಯ ದಶಮಾನೋತ್ಸವದ ಅಂಗವಾಗಿ ಅಕ್ಟೋಬರ್ 18ರಂದು ಸಂಜೆ 6 ಗಂಟೆಗೆ ‘ದಶ ಹೆಜ್ಜೆ’ ಎಂಬ ಶೀರ್ಷಿಕೆಯಡಿ ಅದ್ಧೂರಿ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅಕಾಡೆಮಿಯ ಮಾಲೀಕ ಹಾಗೂ ನೃತ್ಯ ನಿರ್ದೇಶಕ ಕುಮಾರ್ ರಿದಮ್ ಅವರು, ಅಕಾಡೆಮಿಯ ಹತ್ತು ವರ್ಷಗಳ ಪಯಣದ ಸವಿನೆನಪಿಗಾಗಿ ಈ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ನೃತ್ಯ ಕಲೆಯ ಮೂಲಕ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸುವುದರ ಜೊತೆಗೆ, ನೃತ್ಯ ಕ್ಷೇತ್ರದಲ್ಲಿ ಅಕಾಡೆಮಿ ಸಾಧಿಸಿರುವ ಪ್ರಗತಿ ಮತ್ತು ಯಶಸ್ಸನ್ನು ಸಂಭ್ರಮಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ನೃತ್ಯಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.


Share with

Leave a Reply

Your email address will not be published. Required fields are marked *