ಮಧೂರು: ಶ್ರೀ ನಾಗರಾಜ -ಗುಳಿಗ ದೈವ ಸನ್ನಿಧಿಯ ಬ್ರಹ್ಮಕಲಶೋತ್ಸವದ ಲಕ್ಕಿ ಕೂಪನ್ ಬಿಡುಗಡೆ

Share with

ಕಾಸರಗೋಡು: ಮಧೂರು ಮನ್ನಿಪಾಡಿಯ ವಿವೇಕಾನಂದ ನಗರದಲ್ಲಿರುವ ಶ್ರೀ ನಾಗರಾಜ -ಗುಳಿಗ ದೈವ ಸನ್ನಿಧಿಯ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಿಧಿ ಸಂಗ್ರಹಗೋಸ್ಕರ ಹೊರಡಿಸಿದ ಲಕ್ಕಿ ಕೂಪನ್ ನ ಬಿಡುಗಡೆ ಕಾರ್ಯಕ್ರಮವು ಶ್ರೀ ನಾಗರಾಜ ಗುಳಿಗ ದೈವ ಸನ್ನಿಧಿಯಲ್ಲಿ ನಡೆಯಿತು.

ಸನ್ನಿಧಿಯ ತಂತ್ರಿ ಬ್ರಹ್ಮಶ್ರೀ ಉಳಿಯ ವಿಷ್ಣುಅಸ್ರರವರು ಲಕ್ಕಿ ಕೂಪನನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಈ ವೇಳೆಯಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ದೇವದಾಸ್ ಕಾಮತ್, ಕಾರ್ಯಾಧ್ಯಕ್ಷ ದಾಮೋದರನ್, ಗೌರವಾಧ್ಯಕ್ಷ ವಿಶ್ವನಾಥ್ ಶೆಟ್ಟಿ,ಪ್ರಧಾನ ಕಾರ್ಯದರ್ಶಿ ಅವಿನಾಶ್.ಆರ್, ಶ್ರೀ ನಾಗರಾಜ ಗುಳಿಗ ದೈವ ಸನ್ನಿಧಿಯ ಪ್ರಧಾನ ಕಾರ್ಯದರ್ಶಿ ವಸಂತಕುಮಾರ್, ಬ್ರಹ್ಮ ಕಲಶೋತ್ಸವ,ದ ಸಮಿತಿಯ ಕೋಶಾಧಿಕಾರಿ ಪ್ರಜಿತ್, ಸನ್ನಿಧಿಯ ಕೋಶಾಧಿಕಾರಿ ಶರತ್ ಕುಮಾರ್ ಹಾಗೂ ಸುನಿಲ್ ಕುಮಾರ್, ಪ್ರಸಾದ್, ಅಶೋಕನ್, ಸಜಿತ್ ಕೆ.ಪಿ, ಅಜಿತ್ ಆರ್.ಎಸ್, ಉದಯಕುಮಾರ್ ಮನ್ನಿ
ಪಾಡಿ, ಹಾಗೂ ಹಲವು ಸಂಘ-ಸಂಸ್ಥೆಗಳ ಗಣ್ಯರು ಈ ವೇಳೆಯಲ್ಲಿ ಉಪಸ್ಥಿತರಿದ್ದರು.


Share with

Leave a Reply

Your email address will not be published. Required fields are marked *