Kasaragod: ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದಕ್ಕೆ ಟ್ರಾನ್ಸ್ ಫಾರ್ಮರ್ ಫ್ಯೂಸ್ ಕಿತ್ತ ಭೂಪ..!

Share with

ಕಾಸರಗೋಡು: ಬಿಲ್‌ ಪಾವತಿಸದಿದ್ದಕ್ಕೆ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರಿಂದ ಕುಪಿತಗೊಂಡ ವ್ಯಕ್ತಿಯೊಬ್ಬ ಏಳು ಟ್ರಾನ್ಸ್ ಫಾರ್ಮರ್ ಗಳ ಪ್ಯೂಸ್ ಕಿತ್ತ ಘಟನೆ ಕೇರಳದ ಕಾಸರಗೋಡಿನಲ್ಲಿ ನಡೆದಿದೆ ಎಂದು ಕೇರಳ ರಾಜ್ಯ ವಿದ್ಯುತ್ ನಿಗಮ (ಕೆಎಸ್‌ಇಬಿ) ಅಧಿಕಾರಿಗಳು ಶನಿವಾರ ಹೇಳಿದ್ದಾರೆ.

ಶುಕ್ರವಾರ(ನ.15) ಸಂಜೆ 6.45ಕ್ಕೆ ಘಟನೆ ನಡೆದಿದ್ದು, ಕಾಸರಗೋಡು ನಗರ ಹಾಗೂ ಸಮೀಪದ ಪ್ರದೇಶಗಳಿಗೆ ಸಮಸ್ಯೆ ಉಂಟಾಗಿದೆ.

ಶುಕ್ರವಾರ ಸಂಜೆ 6.45ಕ್ಕೆ ಘಟನೆ ನಡೆದಿದ್ದು, ಕಾಸರಗೋಡು ನಗರ ಹಾಗೂ ಸಮೀಪದ ಪ್ರದೇಶಗಳಿಗೆ ಸಮಸ್ಯೆ ಉಂಟಾಗಿದೆ. ಕೂಡಲೇ ವಿದ್ಯುತ್‌ ಅಡಚಣೆಯಾಗಿರುವ ಬಗ್ಗೆ ಹಲವು ದೂರುಗಳು ಬಂದವು. ನಾವು ಪರಿಶೀಲನೆ ಮಾಡಿದಾಗ ಏನೂ ಸಮಸ್ಯೆ ಕಂಡುಬಂದಿಲ್ಲ ಎಂದು ಕೆಎಸ್‌ಇಬಿ ಅಧಿಕಾರಿಗಳು ತಿಳಿಸಿದ್ದಾರೆ.

ಎಐ ಚಿತ್ರ

ಬಳಿಕ ಟ್ರಾನ್ಸ್‌ಫಾರ್ಮ‌ರ್ ಅನ್ನು ಪರಿಶೀಲಿಸಿದಾಗ ಪ್ಯೂಸ್‌ಗಳು ಕಿತ್ತಿರುವುದು ಗೊತ್ತಾಗಿದೆ. ಹುಡುಕಾಟ ನಡೆಸಿದಾಗ ಸಮೀಪದಲ್ಲಿ ಪ್ಯೂಸ್‌ಗಳು ಪತ್ತೆಯಾಗಿವೆ. ಅವುಗಳಲ್ಲಿ ಕೆಲವು ಹಾನಿಯಾಗಿವೆ. ಹೀಗಾಗಿ ನಾವು ಹೆಚ್ಚುವರಿಯಾಗಿದ್ದ ಪ್ಯೂಸ್‌ಗಳನ್ನು ಬಳಸಿ ರಾತ್ರಿ 8 ಗಂಟೆಗೆ ವಿದ್ಯುತ್‌ ಪೂರೈಕೆ ಸುಗಮಗೊಳಿಸಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ.

ಮಾಹಿತಿ ಅಧರಿಸಿ ಶಂಕಿತ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ತನಗೆ ವಯಸ್ಸಾದ ತಂದೆ ಇದ್ದಾರೆಂದೂ, ತಾನು ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆ ಎಂದೂ ಆತ ವಿಚಾರಣೆ ವೇಳೆ ಹೇಳಿದ್ದಾನೆ. ಕೆಎಸ್‌ಇಬಿ ಅಧಿಕಾರಿಗಳು ದೂರು ಕೊಟ್ಟರೆ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಶನಿವಾರ ದೂರು ಕೊಡುತ್ತೇವೆ. ಹಲವಾರು ಪ್ಯೂಸ್‌ಗಳು ಹಾನಿಯಾಗಿವೆ. ಘಟನೆಯಿಂದಾಗಿ ಒಂದು ಗಂಟೆಗೂ ಅಧಿಕ ಹೊತ್ತು ವಿದ್ಯುತ್ ಸ್ಥಗಿತಗೊಂಡಿದೆ ಎಂದು ಕೆಎಸ್‌ಇಬಿ ಅಧಿಕಾರಿಗಳು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *