ಕಾಂಗ್ರೆಸ್‌ನಲ್ಲಿ ‘ಯಾರು ಸಿಎಂ?’ ಎಂಬ ಪ್ರಶ್ನೆ ಗಂಭೀರ ರೂಪ ಪಡೆದುಕೊಂಡಿದ್ದು, ಇಬ್ಬರು ನಾಯಕರ ಬೆಂಬಲಿಗರು ತಮ್ಮ ನಾಯಕನ ಪರ ಲಾಬಿ ಮಾಡುತ್ತಿದ್ದಾರೆ.

ಈ ಬಗ್ಗೆ ನಾಳೆ ಅಂತಿಮ ನಿರ್ಧಾರ ಹೊರಬರಬಹುದೆಂಬ ನಿರೀಕ್ಷೆ ಇದೆ. ಇದರ ನಡುವೆ ಡಿಕೆಶಿ ದಿಢೀರನೆ ಮುಂಬೈಗೆ ತೆರಳಿದ್ದು, ‘ಖಾಸಗಿ ಕಾರ್ಯಕ್ರಮ’ ಕಾರಣವೆಂದರೂ, ಈ ಭೇಟಿಗೂ ರಾಜಕೀಯ ಹಿನ್ನೆಲೆ ಇರಬಹುದೆಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಇನ್ನು, CM ಸಿದ್ದರಾಮಯ್ಯ ಕುರ್ಚಿಯಿಂದ ಕೆಳಗಿಳಿಯುತ್ತಾರಾ? ಇಲ್ವಾ? ಎಂಬುದು ಕುತೂಹಲ ಮೂಡಿಸಿದೆ.




