ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಿಗೆ ಶಾಸಕ ಅಶೋಕ್ ರೈ ಅವರ ಕುಟುಂಬದ ವತಿಯಿಂದ 100 ಗ್ರಾಂ ಚಿನ್ನವನ್ನು ಸಮರ್ಪಿಸಲಾಯಿತು. ಸುಮಾರು ರೂ.15 ಲಕ್ಷ ಮೌಲ್ಯದ ಚಿನ್ನವನ್ನು ದೇವರ ಸೇವಾರ್ಥವಾಗಿ ಅರ್ಪಿಸಲಾಯಿತು.

ಶಾಸಕ ಅಶೋಕ್ ರೈ ಅವರ ಕುಟುಂಬದ ಸದಸ್ಯರು ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದ ಬಳಿಕ ಚಿನ್ನವನ್ನು ದೇವರಿಗೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅರ್ಚಕರು ಉಪಸ್ಥಿತರಿದ್ದು, ಕುಟುಂಬದವರನ್ನು ಗೌರವಿಸಿದರು. ದೇವರಿಗೆ ಚಿನ್ನ ಸಮರ್ಪಿಸಿರುವುದು ಭಕ್ತರ ಗಮನ ಸೆಳೆಯಿತು.




