ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಗಲಾಟೆ ಜೋರಾಗಿದೆ. ಈ ನಡುವೆಯೇ CM ಸಿದ್ದರಾಮಯ್ಯರ ಅಭಿಮಾನಿಗಳು ಚಿಕ್ಕಮಗಳೂರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಗರದ ತಾಲೂಕು ಆಫೀಸ್ ಬಳಿಯ ಗಣಪತಿ ದೇವಸ್ಥಾನದಲ್ಲಿ ಸಿದ್ದರಾಮಯ್ಯ CM ಆಗಿ ಮುಂದುವರೆಯಲಿ ಎಂದು ಜಸ್ಟೀಸ್ ಫಾರ್ ಸಿದ್ದರಾಮಯ್ಯ ಎಂಬ ಭಾವ ಚಿತ್ರದೊಂದಿಗೆ ಈ ವಿಶೇಷ ಪೂಜೆ ಮಾಡಿಸಿದ್ದಾರೆ.

ಈ ವೇಳೆ ಅಭಿಮಾನಿಗಳು ತೆಂಗಿನಕಾಯಿ, ಈಡುಗಾಯಿ ಒಡೆದಿದ್ದಾರೆ. ಅಲ್ಲದೇ ಉಳಿಯಲಿ ಉಳಿಯಲಿ ಸಿದ್ದರಾಮಯ್ಯ ಉಳಿಯಲಿ ಎಂದು ಘೋಷಣೆ ಕೂಗಿದ್ದಾರೆ.




