ಕಾಂಗ್ರೆಸ್ ಬಡಿದಾಟಕ್ಕೆ ಬ್ರೇಕ್‌ಫಾಸ್ಟ್ ಮೂಲಕ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ನಿನ್ನೆ CM ಮನೆಯಲ್ಲಿ ಉಪಾಹಾರ ಸೇವಿಸಿದ DCM, ಸದ್ಯದಲ್ಲೇ CM ಅವರನ್ನು ಡಿನ್ನರ್ ಪಾರ್ಟಿಗೆ ಕರೆಯುತ್ತೇನೆ ಎಂದಿದ್ದಾರೆ.

‘ನನ್ನ-ಸಿದ್ದರಾಮಯ್ಯರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನಾನು ಗುಂಪುಗಾರಿಕೆ ಮಾಡಲ್ಲ. 7-9 ಶಾಸಕರ ಜೊತೆ ದೆಹಲಿಗೆ ಹೋಗೋದು ದೊಡ್ಡ ಕೆಲಸ ಅಲ್ಲ. ಅದರಿಂದ ಯಾವುದೇ ಪ್ರಯೋಜನ ಇಲ್ಲ. ನಾನು 140 ಶಾಸಕರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವವನು’ ಎಂದು ಹೇಳಿದ್ದಾರೆ.




