Kasaragod: ಮಹಿಳೆ ವಿರುದ್ಧ ಕೇಸು ದಾಖಲಿಸಿದ ಪೊಲೀಸ್ ವರ್ಗಾವಣೆ

Share with

ಕಾಸರಗೋಡು: ಅಪ್ರಾಪ್ತ ಸಹೋದರ ಸ್ಕೂಟರ್ ಚಲಾಯಿಸಿದ್ದಾಗಿ ಆರೋಪಿಸಿ ಮಹಿಳೆಯ ವಿರುದ್ಧ ಕೇಸು ದಾಖಲಿಸಿದ ವಿದ್ಯಾನಗರ ಪೊಲೀಸ್ ಠಾಣೆಯ ಎಸ್.ಐ ಅನೂಪ್ ಅವರನ್ನು ಸೈಬ‌ರ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

ಕಾಸರಗೋಡು ಸ್ಪೆಷಲ್ ಬ್ರಾಂಚ್ ಡಿವೈಎಸ್‌ಪಿ ಸುನಿಲ್ ಕುಮಾರ್ ನೀಡಿದ ತನಿಖಾ ವರದಿಯಂತೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ಬಾಲಕ ಸ್ಕೂಟರ್ ಚಲಾಯಿಸಿದ್ದಾಗಿ ಪೊಲೀಸರು ಕೇಸು ದಾಖಲಿಸಿದ್ದರು.

ಆದರೆ ಸಿಸಿ ಟಿವಿ ದೃಶ್ಯಗಳಲ್ಲಿ ಬಾಲಕ ಚಲಾಯಿಸಿಲ್ಲ ಎಂಬುದು ತಿಳಿದು ಬಂದಿತು.


Share with

Leave a Reply

Your email address will not be published. Required fields are marked *