ಪಾಪ, ಲಕ್ಷ್ಮೀ ಹೆಬ್ಬಾಳ್ಳರ್ ನನ್ನ ಪಕ್ಕ ಕೂತು ಕಣ್ಣೀರು ಹಾಕಿದರು: ಮಧು ಬಂಗಾರಪ್ಪ

Share with

ಬಿಜೆಪಿಯವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಅವರಿಗೆ ಸದನದಲ್ಲಿ ಅವಮಾನ ಮಾಡಿದ್ದಾರೆ. ಸರಿಯಾಗಿ ಹೇಳಿದ್ದರೂ ಅವರಿಗೆ ಅವಮಾನಿಸಲಾಯ್ತು. ಅವರು ನನ್ನ ಪಕ್ಕ ಕುಳಿತು ಪಾಪ ಕಣ್ಣೀರು ಹಾಕಿದರು. ಅಧಿಕಾರಿಗಳು ನನಗೆ ಗೊಂದಲ ಮಾಡಿದರು ಎಂದು ಅಲವತ್ತುಕೊಂಡರು ಎಂಬುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಗೃಹಲಕ್ಷ್ಮಿ ಯೋಜನೆಗೆ ವಿರೋಧ ಮಾಡಿದ ಬಿಜೆಪಿಯವರೇ ಇವತ್ತು ಹಣ ಬಂದಿಲ್ಲವೆಂದು ಆರೋಪಿಸುತ್ತಿದ್ದಾರೆ. ನಮ್ಮ ಸರ್ಕಾರದ ಯೋಜನೆಗಳಿಗೆ ಅವರೇ ಮೊದಲು ಹೋಗಿ ಅರ್ಜಿ ಹಾಕುತ್ತಾರೆ. ವಿಜಯೇಂದ್ರ ರಸ್ತೆಯಲ್ಲಿ ಹೋಗಿ ಬರ್ತ್‌ಡೇ ಮಾಡಿಕೊಂಡಿದ್ದಾರೆ. ಬರ್ತ್‌ಡೇ ಮಾಡ್ಕೊಂಡ್ರೆ ಏನೂ ಆಗಲ್ಲ. ನಿಮ್ಮ ಅಣ್ಣನೇ ಎಂಪಿಯಾಗಿದ್ದಾರೆ. ಹೋಗಿ ಕನಿಷ್ಠ ಬೆಂಬಲ ಬೆಲೆ ಬಗ್ಗೆ ಕೇಳಲಿ. ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡದಿರುವುದು ನಿಜಕ್ಕೂ ಕೇಂದ್ರದ ವೈಫಲ್ಯ ಎಂದರು.


Share with

Leave a Reply

Your email address will not be published. Required fields are marked *