ಬೆಂಗಳೂರು: ಮೈಸೂರಿನ ಜಯಮಾರ್ತಾಂಡ ದ್ವಾರದ ಬಳಿ ಬಲೂನ್ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಒಬ್ಬ ಸಾವನ್ನಪ್ಪಿದ ಸ್ಥಳವನ್ನು ಎನ್‌ಐಎ ತಂಡ ಶುಕ್ರವಾರ ಪರಿಶೀಲನೆ ನಡೆಸಿದೆ.

ಬಲೂನ್‌ಗೆ ಗ್ಯಾಸ್ ತುಂಬಿಸುವ ವೇಳೆ ನೈಟ್ರೋಜನ್ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಪರಿ ಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು, ಐವರು ಗಂಭೀರ ವಾಗಿ ಗಾಯಗೊಂಡಿದ್ದರು.
ಅರಮನೆ ಮೈದಾನದಲ್ಲಿ ಮಾಗಿ ಉತ್ಸವವಿದ್ದು, ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ಭಾರೀ ಜನ ಸೇರಿದ್ದರು. ಸ್ಫೋಟದಿಂದ ಗ್ಯಾಸ್ ಬಲೂನ್ ಮಾರಾಟ ಮಾಡುತ್ತಿದ್ದ 44 ವರ್ಷದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಬೆಂಗಳೂರು ಮೂಲದ ನಿವಾಸಿ ಲಕ್ಷ್ಮೀ, ನಂಜನಗೂಡು ನಿವಾಸಿ ಮಂಜುಳಾ, ಕೋಲ್ಕತ್ತ ಮೂಲಕ ಶಾಹಿನಾ ಶಬೀರ್, ರಾಣೆಬೆನ್ನೂರಿನ ಕೊಟ್ರೇಶ್ ಗಾಯ ಗೊಂಡವರು. ಇವ ರನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಜುಳಾ ಮತ್ತು ಲಕ್ಷ್ಮೀ ಗಂಭೀರ ಸ್ಥಿತಿಯಲ್ಲಿದ್ದಾರೆ.




