ಶಿಕ್ಷಕರು ಬೈದಿದ್ದಕ್ಕೆ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ ಕೇಸ್‌ನಲ್ಲಿ ಶಾಲೆಯ ಮುಖ್ಯ ಶಿಕ್ಷಕ ಸೇರಿ 6 ಜನರ ವಿರುದ್ಧ FIR ದಾಖಲಾಗಿದೆ.

ಪವನ್ (15)ಮೃತ ಬಾಲಕ. ಯಾದಗಿರಿಯ ವಡಗೇರಾ ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಪವನ್, ಶಿಕ್ಷಕರು ಬೈದಿದ್ದಕ್ಕೆ ಜ.21ರಂದು ಶಾಲೆ ಆವರಣದಲ್ಲಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಇದೀಗ ಮೃತನ ಪೋಷಕರು ನೀಡಿದ ದೂರಿನ ಅನ್ವಯ 6 ಜನ ಶಿಕ್ಷಕರ ವಿರುದ್ಧ FIR ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.




