ಕೋತಿಯನ್ನು ರಕ್ಷಣೆ ಮಾಡಲು ಹೋಗಿ ಆಟೋ ಚಾಲಕನೊಬ್ಬ ಸಾವನ್ನಪ್ಪಿದ್ದಾನೆ. ಈ ಘಟನೆ ತುಮಕೂರಿನ ಕೊರಟಗೆರೆಯ ಜಂಪೇನಹಳ್ಳಿ ಕೆರೆ ಬಳಿ ನಡೆದಿದೆ. ಮಹೇಂದ್ರ ಕುಮಾರ್ ಮೃತ ವ್ಯಕ್ತಿ. ರಸ್ತೆಯಲ್ಲಿ ಕೋತಿ ಏಕಾಏಕಿ ಅಡ್ಡ ಬಂದಿದೆ. ಈ ವೇಳೆ ಮಹೇಂದ್ರ ಕುಮಾರ್ ಏಕಾಏಕಿಯಾಗಿ ಬ್ರೇಕ್ ಹಾಕಿದ್ದಾನೆ.

ಈ ವೇಳೆ ಪಲ್ಟಿಯಾದ ಆಟೋಗೆ ಎದುರುಗಡೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಮಹೇಂದ್ರ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಈ ಕುರಿತು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.




