ನವವಿವಾಹಿತೆ ಪತಿಯನ್ನು ಬಿಟ್ಟು ನಾಪತ್ತೆಯಾದ ವಿಷಯ ತಿಳಿದ ಯುವತಿಯ ಮಾವ ಹೃದಯಾಘಾತದಿಂದ ಮೃತಪಟ್ಟ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಎರಡೂ ಕುಟುಂಬಗಳ ಪರಸ್ಪರ ಒಪ್ಪಿಗೆಯ ಮೇಲೆ ಫೆ. 8ರಂದು ಕೊಪ್ಪಳ ನಿವಾಸಿ ನಾಗರಾಜ್ & ರಾಯಚೂರು ಜಿಲ್ಲೆಯ ಸಿಂಧನೂರಿನ ಸಂಜನಾ ನಡುವೆ ವಿವಾಹ ನಡೆದಿತ್ತು. ಆದರೆ ಮಾ. 21ರ ರಾತ್ರಿ 8.30ಕ್ಕೆ ಸಂಜನಾ ಮನೆ ಬಿಟ್ಟು ಪರಾರಿ ಆಗಿದ್ದಳು. ಈ ವಿಷಯ ತಿಳಿದ ನಾಗರಾಜ್‌ನ ತಂದೆ ಖಂಡೆಪ್ಪ ಹೃದಯಘಾತದಿಂದ ಮೃತಪಟ್ಟಿದ್ದಾರೆ. ಈ ಬಗ್ಗೆ ನಾಗರಾಜ್ ದೂರು ದಾಖಲಿಸಿದ್ದಾರೆ.




