ವರದಕ್ಷಿಣೆ ಕಿರುಕುಳ; ಪತ್ನಿ ಜೊತೆ ಮಗುವನ್ನೂ ನಡುರಸ್ತೆಯಲ್ಲಿ ಬಿಟ್ಟು ಹೋದ ಪತಿ..!!

Share with

ಕಟಪಾಡಿ: ಹೆಚ್ಚಿನ ಹಣವನ್ನು ತರುವಂತೆ ಒತ್ತಾಯಿಸಿ ಪತಿ ಹಾಗೂ ಮನೆಯವರು 5 ½ ತಿಂಗಳ ಮಗುವಿನೊಂದಿಗೆ ಮಹಿಳೆಯನ್ನು ಮನೆಯಿಂದ ಹೊರಗೆ ಹಾಕಿ ಪಡುಬಿದ್ರಿ ಮಾರ್ಗ ಮಧ್ಯದಲ್ಲಿ ಬಿಟ್ಟು ಹೋದ ಘಟನೆಯೊಂದು ವರದಿಯಾಗಿದೆ..

ಮೂಡಬೆಟ್ಟು ಗ್ರಾಮದ ಸರಕಾರಿಗುಡ್ಡೆ ನಿವಾಸಿ ಯಾಸೀರ್ ಸಾಬನ್ ಅಲಿ ಎಂಬಾತ 2024ರ ಮೇ ತಿಂಗಳಿನಲ್ಲಿ ನಡ್ನಾಲು ಗ್ರಾಮದ ಶಬೀನ ಎಂಬ ಯುವತಿಯನ್ನು ಮದುವೆಯಾಗಿದ್ದ.

ಅನಂತರದ ದಿನಗಳಲ್ಲಿ ಶಬೀನ ಅವರಿಗೆ ಪತಿ, ಅವರ ತಂದೆ ಸಾಬನ್ ಸಾಹೇಬ್, ತಾಯಿ ಅವ್ವಮ್ಮ ಮಾನಸಿಕ ಕಿರುಕುಳವನ್ನು ನೀಡುತ್ತಿದ್ದರು ಎಂದು ದೂರಲಾಗಿದೆ. ಇತ್ತೀಚೆಗೆ ಅದು ತಾರಕಕ್ಕೇರಿದಾಗ ಪತಿಯ ಮನೆಯವರು ಬೈದು, ಜೀವ ಬೆದರಿಕೆ ಒಡ್ಡಿ ಹಲ್ಲೆ ಮಾಡಿ ಮನೆಯಿಂದ ಹೊರಗೆ ಹಾಕಿ ದಾರಿ ಮಧ್ಯೆ ಬಿಟ್ಟು ಹೋದರು ಎಂದು ಹೇಳಲಾಗಿದೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share with

Leave a Reply

Your email address will not be published. Required fields are marked *