ವೃದ್ಧಾಶ್ರಮದಲ್ಲಿದ್ದ ಮಹಿಳೆ ಸಾವು

Share with

ಕಾಪು: ಉದ್ಯಾವರ ಹಿರಿಯ ನಾಗರಿಕರ ಕನಸಿನ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದ ಜಯಲಕ್ಷ್ಮೀ (71) ಮೇ 7ರಂದು ಮೃತಪಟ್ಟಿದ್ದಾರೆ.

ಒಂದೂವರೆ ವರ್ಷದ ಹಿಂದೆ ಬೈಂದೂರು ಸೇನಾಪುರ ಪರಿಸರದಲ್ಲಿ ಅಸಹಾಯಕರಾಗಿ ತಿರುಗಾಡುತ್ತಿದ್ದ ಜಯಲಕ್ಷ್ಮೀ ಎಂಬಾಕೆಯನ್ನು ಸ್ಥಳೀಯರಾದ ವೆಂಕಟಾಚಲ ಐತಾಳ್ ಮತ್ತು ಕೃಷ್ಣಮೂರ್ತಿ ಐತಾಳ್ ಉಡುಪಿಯ ಸಹಾಯವಾಣಿ ಕೇಂದ್ರಕ್ಕೆ ಕರೆದುಕೊಂಡು ಬಂದು, ಬಳಿಕ ಉದ್ಯಾವರ ಗುಡ್ಡೆಯಂಗಡಿಯ ಹಿರಿಯ ನಾಗರಿಕರ ಕನಸಿನಮನೆ ವೃದ್ಧಾಶ್ರಮಕ್ಕೆ ದಾಖಲಿಸಿದ್ದರು.

ಜಯಲಕ್ಷ್ಮೀ ಅವರು ಮೇ 7ರಂದು ಆಶ್ರಮದಲ್ಲಿರುವಾಗ ಮೃತಪಟ್ಟಿದ್ದು ಆಶ್ರಮದವರ ಮಾಹಿತಿಯಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share with

Leave a Reply

Your email address will not be published. Required fields are marked *