ಬೆಳ್ತಂಗಡಿ: ಎ.29ರ ಬುಧವಾರ ಚಾರ್ಮಾಡಿ ಘಾಟ್‌ನ 3ನೇ ತಿರುವಿನ ಗುಡ್ಡ ಪ್ರದೇಶದಲ್ಲಿ, ಕಾಡಾನೆ ಕಾಣಿಸಿಕೊಂಡು ವಾಹನ ಸವಾರರಿಗೆ ಭಯ ಹುಟ್ಟಿಸಿತ್ತು.

ಇವತ್ತು (ಎ.30ರ ಗುರುವಾರ) ಮತ್ತೆ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಒಂಟಿ ಸಲಗ ಸಂಚಾರ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ.
ಚಾರ್ಮಾಡಿ ಘಾಟ್‌ನಲ್ಲಿ ಒಂಟಿ ಸಲಗ ಸಂಚರಿಸುತ್ತಿರುವ ದೃಶ್ಯವನ್ನು ವಾಹನ ಸವಾಹರರು ಸೆರೆ ಹಿಡಿದಿದ್ದಾರೆ. ಸದ್ಯ ಬೇಸಿಗೆ ಹಿನ್ನೆಲೆ ಕಾಡಿನಲ್ಲಿ ನೀರಿನ ಅಭಾವ ಇದೆ. ಹೀಗಾಗಿ ಆಗಾಗ್ಗೆ ನಾಡಿಗೆ ಕಾಡಾನೆ ಬರುತ್ತಿರುತ್ತದೆ. ಸಾರ್ವಜನಿಕರು ಹಾಗೂ ರಸ್ತೆಯಲ್ಲಿ ಸಂಚರಿಸುವವರು ಎಚ್ಚರಿಕೆಯಿಂದ ಸಂಚರಿಸಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.




