ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳಬೇಕಿದ್ದ ಕೇರಳದ ದಾದಿ ಮೆದುಳು ಜ್ವರಕ್ಕೆ ಬಲಿ..!

Share with

ಕಾಸರಗೋಡು: ಉತ್ತಮ ಔದ್ಯೋಗಿಕ ಅವಕಾಶದೊಂದಿಗೆ ವಿದೇಶಕ್ಕೆ ತೆರಳಲು ಸಜ್ಜಾಗಿದ್ದ ದಾದಿ ವೃತ್ತಿಯ ಕೇರಳ ಆಲಪ್ಪುಯ ಜಿಲ್ಲೆಯ ಅಂಬಲಪ್ಪುಯ ವಡಕ್ಕೆ ನಿವಾಸಿ ಆರ್ಯಾ ಮೋಳ್ ( 26) ಶುಕ್ರವಾರ ಅಮೀಬಿಕ್ ಮಿದುಳು ಜ್ವರದಿಂದ ಮೃತಪಟ್ಟಿದ್ದಾರೆ.

ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾದಿಯಾಗಿ ದುಡಿಯುತ್ತಿದ್ದ ಇವರು ಉದ್ಯೋಗ ಪ್ರಯುಕ್ತ ವಿದೇಶಕ್ಕೆ ತೆರಳಲು ಎರಡು ತಿಂಗಳ ಹಿಂದೆ ಊರಿಗೆ ತಲುಪಿದ್ದರು. ಬಳಿಕ ರೋಗ ಲಕ್ಷಣಗಳು ಕಾಣಿಸಿಕೊಂಡು ಚಿಕಿತ್ಸೆಯಲ್ಲಿ ಇದ್ದರು.


Share with

Leave a Reply

Your email address will not be published. Required fields are marked *