ಒಂದೇ ಮಳೆಗೆ ತ್ಯಾಜ್ಯ ಕೇಂದ್ರವಾದ ಕುಂಬಳೆ ಮೀನು ಮಾರುಕಟ್ಟೆ..!

Share with

ಕುಂಬಳೆ: ಕುಂಬಳೆಯಲ್ಲಿ ಮಳೆಗಾಲಪೂರ್ವ ಶುಚೀಕರಣ ಚಟುವಟಿಕೆಗಳು ವಿಫಲಗೊಂಡಿರುವುದರಿಂದ ಒಂದೇ ಮಳೆಗೆ ಮೀನು ಮಾರುಕಟ್ಟೆ ರಸ್ತೆ ತ್ಯಾಜ್ಯ ಕೇಂದ್ರವಾಗಿ ಮಾರ್ಪಾಡುಗೊಂಡಿದೆ.

ಇದು ಸಮೀಪದ ವ್ಯಾಪಾರಿಗಳಿಗೆ ಹಾಗೂ ಮೀನು ಕಾರ್ಮಿಕರಿಗೆ ಭಾರೀ ಸಮಸ್ಯೆಯಾಗಿ ಪರಿಣಮಿಸಿದೆ. ಮೀನು ಮಾರುಕಟ್ಟೆ ಸಮೀಪದ ತ್ಯಾಜ್ಯ ರಾಶಿ ಈ ಮೊದಲೇ ಭಾರೀ ಸುದ್ದಿಯಾಗಿತ್ತು. ಕುಂಬಳೆ ಪಂಚಾಯತ್ ನಾಮಮಾತ್ರಕ್ಕಾಗಿ ನಡೆಸಿದ ಶುಚೀಕರಣ ಚಟುವಟಿಕೆಗಳ ವೇಳೆ ಮಾರುಕಟ್ಟೆ ರೋಡ್‌ನತ್ತ ಕಣ್ಣು ಹಾಯಿಸಿಲ್ಲವೆಂಬ ಆರೋಪ ಈ ಹಿಂದೆಯೇ ಕೇಳಿ ಬಂದಿತ್ತು. ಚರಂಡಿಗಳಲ್ಲಿ ತ್ಯಾಜ್ಯ ತುಂಬಿ ತುಳುಕುತ್ತಿರುವುದರಿಂದ ಮಳೆ ನೀರು, ಪ್ಲಾಸ್ಟಿಕ್ ತ್ಯಾಜ್ಯಗಳು ರಸ್ತೆಯ ಮೂಲಕವೇ ಹರಿದು ಹೋಗುತ್ತಿದೆ. ತ್ಯಾಜ್ಯದಿಂದ ರಸ್ತೆಯನ್ನು ಕಾಣಲಾಗದ ಸ್ಥಿತಿ ಉಂಟಾಗಿದೆ. ಪ್ಲಾಸ್ಟಿಕ್ ತ್ಯಾಜ್ಯಗಳು ಹರಿದು ಪೇಟೆಯ ಚರಂಡಿಗಳಿಗೆ ತುಂಬಿಕೊಂಡರೆ ನೀರು ಹರಿದು ಹೋಗಲು ಅಡಚಣೆಯಾಗಲಿದೆ. ಇದು ಪೇಟೆಯಲ್ಲಿ ಮಳೆ ನೀರು ತುಂಬಿಕೊಳ್ಳಲು ಕಾರಣವಾಗಿದೆ.


Share with

Leave a Reply

Your email address will not be published. Required fields are marked *