ನಕಲಿ ದಾಖಲೆಗಳಿಂದ ಬಂದಿರುವ ಬಾಂಗ್ಲಾದವರು…ಕಠಿನ ಕ್ರಮಕ್ಕೆ ಪ್ರಮೋದ್ ಮುತಾಲಿಕ್ ಒತ್ತಾಯ…

ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಬಾಳೂರು ಕಾಫಿತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಯುವಕನ ವಿರುದ್ಧ ಅಪ್ರಾಪ್ತ ವಯಸ್ಕ ಬಾಲಕಿಯ ಅಪಹರಣ, ಮತಾಂತರ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.
ಮಧ್ಯಪ್ರದೇಶ ಮೂಲದ ಅಪ್ರಾಪ್ತ ವಯಸ್ಕ ಬಾಲಕಿಯ ತಾಯಿ ನೀಡಿದ ದೂರಿನನ್ವಯ ಅಸ್ಸಾಂ ಮೂಲದ ಹಬೀವರ್ ಇಸ್ಲಾಂ ವಿರುದ್ಧ ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್ಟೇಟ್ ನಲ್ಲಿ ಕೆಲಸಕ್ಕೆಂದು ಬಂದಿರುವ ಮಧ್ಯಪ್ರದೇಶದ ಗುನಾ ಮೂಲದ ಹಿಂದೂ ದಂಪತಿಯ ನಾಲ್ವರು ಮಕ್ಕಳ ಪೈಕಿ ಕೊನೆಯವಳಾದ 15 ವರ್ಷದ ಬಾಲಕಿಯನ್ನ ಹಬೀವರ್ ಇಸ್ಲಾಂ ಪುಸಲಾಯಿಸಿ ಅಸ್ಸಾಂಗೆ ಕರೆದೊಯ್ದು ಮತಾಂತರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಪ್ರಮೋದ್ ಮುತಾಲಿಕ್ ಆಕ್ರೋಶ
ಘಟನೆ ಬಗ್ಗೆ ಆಕ್ರೋಶ ಹೊರ ಹಾಕಿರುವ ಶ್ರೀರಾಮ ಸೇನಾ ನಾಯಕ ಪ್ರಮೋದ್ ಮುತಾಲಿಕ್ ” ಆರೋಪಿ ಅಸ್ಸಾಂಮಿಗನಲ್ಲ, ಅಕ್ರಮ ಬಾಂಗ್ಲಾ ನಿವಾಸಿ ಎಂದು ಹೇಳಿದ್ದಾರೆ. ಮೂಡಿಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುತಾಲಿಕ್ ”ಕಾಫಿನಾಡಲ್ಲಿ ಸಾವಿರಾರು ಜನ ಅಕ್ರಮ ಬಾಂಗ್ಲಾ ನುಸುಳುಕೋರರಿದ್ದಾರೆ.ಎಲ್ಲರೂ ಅಸ್ಸಾಂ, ಕೊಲ್ಕತಾ ಹೆಸರಿನಲ್ಲಿ ನಕಲಿ ದಾಖಲೆಗಳಿಂದ ಬಂದಿರುವ ಬಾಂಗ್ಲಾದವರು. ಅವರ ದಾಖಲೆಗಳನ್ನ ಅವರ ರಾಜ್ಯಗಳಿಗೆ ಕಳುಹಿಸಿ ಪರಿಶೀಲಿಸಬೇಕು, ಈ ಕುರಿತು ಸಮಗ್ರ ತನಿಖೆಯಾಗಬೇಕು” ಎಂದು ಒತ್ತಾಯಿಸಿದರು.
ಶ್ರೀರಾಮಸೇನಾ ನೇತೃತ್ವದಲ್ಲಿ ದೂರು ಸಲ್ಲಿಸಲಾಗಿದ್ದು ಸೂಕ್ತ ತನಿಖೆಗೆ ಒತ್ತಾಯ ಮಾಡುತ್ತೇವೆ. ಮಲೆನಾಡಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿದ್ದು, ವಲಸೆ ಕಾರ್ಮಿಕರ ಕುರಿತು ಸರ್ಕಾರ ಮತ್ತು ಪೊಲೀಸರು ಹೆಚ್ಚಿನ ನಿಗಾ ವಹಿಸಬೇಕು.ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಶಿಕ್ಷೆಯಾಗಬೇಕು. ಅಕ್ರಮ ನಿವಾಸಿಗಳನ್ನು ಜಿಲ್ಲೆಯಿಂದ ಓಡಿಸಬೇಕು.ನ್ಯಾಯ ಸಿಗದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.
ಹಾಸನದ ಓರ್ವ ಮಹಿಳೆ 22 ಜನ ಬಾಂಗ್ಲಾದವರಿಗೆ ಆಧಾರ್ ಸಹಿತ ನಕಲಿ ದಾಖಲೆ ಮಾಡಿಕೊಟ್ಟಿದ್ದಾಳೆ. ಬಾಂಗ್ಲಾದವರು ಬರುತ್ತಿರುವುದು ಇಸ್ಲಾಂ ಬೆಳೆಸುವ ಕೆಲಸಕ್ಕೆ, ನಿಮ್ಮ ಉದ್ಧಾರಕ್ಕಲ್ಲ. ಹಿಂದೂ ಎಸ್ಟೇಟ್ ಮಾಲೀಕರೇ ಎಚ್ಚರ” ಎಂದು ಮುತಾಲಿಕ್ ಹೇಳಿದರು.
15 ವರ್ಷದ ಬಾಲಕಿಯನ್ನ ಕರೆದೊಯ್ದ ಗೋಮಾಂಸ ತಿನ್ನಿಸಿ, ಮತಾಂತರ ಮಾಡಿ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿ ಮದುವೆ ಮಾಡಿಸಿದ್ದಾರೆ. ಆರೋಪಿ ಪರ ಯಾವ ವಕೀಲರು ವಕಾಲತ್ತು ಹಾಕಬಾರದು, ಜಾಮೀನು ಕೊಡಬಾರದು. ಆತ ಜೈಲಿನಲ್ಲೇ ಬಿದ್ದು, ಕೊಳೆತು ಸಾಯಬೇಕು.ಯಾವ ವಕೀಲರಿಗೂ ಜಾಮೀನು ಕೊಡಿಸಲು ಮುಂದೆ ಬರಲು ನಾವು ಬಿಡುವುದಿಲ್ಲ. ನಿಮ್ಮ ಮನೆ ಮಕ್ಕಳಿಗೆ ಹೀಗೆ ಆಗಿದ್ದರೆ ಜಾಮೀನು ಕೊಡಿಸುತ್ತಿದರೆ ವಕೀಲರೇ ಎಂದು ನಾನು ಕೇಳುತ್ತನೆ” ಎಂದು ಎಚ್ಚರಿಕೆ ನೀಡಿದರು.




