ಪುತ್ತೂರು ಬಿಲ್ಲವ ಬ್ರಿಗೇಡ್ ಸಭೆ- ಪದಾಧಿಕಾರಿಗಳ ಆಯ್ಕೆ

Share with

ಪುತ್ತೂರು: ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ, ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಸಮುದಾಯ ಅಭಿವೃದ್ಧಿ ಹೊಂದಲು ಶ್ರಮಿಸುವ ಉದ್ದೇಶದಿಂದ ಪುತ್ತೂರಿನಲ್ಲಿ ನೂತನವಾಗಿ ಅಸ್ತಿತ್ವಕ್ಕೆ ತರಲಾಗಿರುವ ಬಿಲ್ಲವ ಬ್ರಿಗೇಡ್ ಇದರ ಪ್ರಥಮ ಗೌರವಾಧ್ಯಕ್ಷರಾಗಿ ಡಾ.ರಾಜಾರಾಮ್ ಕೆ.ಬಿ., ಅಧ್ಯಕ್ಷರಾಗಿ ಜಯಪ್ರಕಾಶ್ ಬದಿನಾರು ಕೋಡಿಂಬಾಡಿ, ಪ್ರಧಾನ ಕಾರ್ಯದರ್ಶಿಯಾಗಿ ರಂಜಿತ್ ಸುವರ್ಣ ಪೆರಿಯಡ್ಕ ಮತ್ತು ಕೋಶಾಧಿಕಾರಿಯಾಗಿ ಚಂದ್ರಶೇಖರ ಕಲ್ಲಗುಡ್ಡೆ ಆಯ್ಕೆಯಾಗಿದ್ದಾರೆ. ಪುತ್ತೂರಿನ ಮಾಜಿ ಸೈನಿಕರ ಭವನದಲ್ಲಿ ಜೂ.25ರಂದು ನಡೆದ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಗೌರವ ಸಲಹೆಗಾರರಾಗಿ ಸಂಜೀವ ಪೂಜಾರಿ ಕೂರೇಲು, ಪದ್ಮನಾಭ ಪೂಜಾರಿ ಅಳಿಕೆ, ದೇವಾನಂದ ಕೆ., ಉಪಾಧ್ಯಕ್ಷರಾಗಿ ಅಣ್ಣಿ ಪೂಜಾರಿ ಕೆಮ್ಮಾಯಿ, ಮೋಹನ್ ಗುರ್ಜಿನಡ್ಕ, ಜಗದೀಶ್ ಪೂಜಾರಿ ನೇರಳಕಟ್ಟೆ, ಜತೆ ಕಾರ್ಯದರ್ಶಿಗಳಾಗಿ ಹರೀಶ್ ಬಂಗೇರ, ಪ್ರವೀಣ್ ಅಳಿಕೆ ಸಣ್ಣಗುತ್ತು, ಕಿರಣ್ ಕುಮಾರ್ ಬಸಂತಕೋಡಿ,ಕಾನೂನು ಸಲಹೆಗಾರರಾಗಿ ಮನೋಹರ ಎ. ಆರುವಾರಗುತ್ತು, ಕುಮಾರನಾಥ ಎಸ್. ಕೋಡಿಂಬಾಡಿ, ಮಾಧ್ಯಮ ಸಲಹೆಗಾರರಾಗಿ ಸಂತೋಷ್ ಕುಮಾರ್ ಶಾಂತಿನಗರ, ಪ್ರಚಾರ ಸಮಿತಿ ಪ್ರಮುಖರಾಗಿ ಅಜಿತ್ ಕೆ.ಆರ್. ಪೂಜಾರಿ ಕೋಡಿಂಬಾಡಿ, ಪೃಥ್ವಿರಾಜ್ ಗೆಣಸಿನ ಕುಮೇರು, ಸಲಹೆಗಾರರಾಗಿ ನವೀನ್ ಕರ್ಕೇರ, ಎಲ್ಯಣ್ಣ ಪೂಜಾರಿ, ಹರೀಶ್ ನಿಡ್ಪಳ್ಳಿ, ಶಿವಪ್ರಸಾದ್ ಇರ್ದೆ, ಸಂಘಟನಾ ಕಾರ್ಯದರ್ಶಿಗಳಾಗಿ ನಾರಾಯಣ ಪೂಜಾರಿ ಇರ್ದೆ, ಕರುಣಾಕರ ಕರ್ಕೇರ ಬಲ್ನಾಡು ಮತ್ತು ರಾಜೇಶ್ ಅರ್ಲಪದವು ಅವರನ್ನು ಆಯ್ಕೆ ಮಾಡಲಾಯಿತು.
ಸಂಸ್ಥೆಯ ಬಲವರ್ಧನೆ, ಸಮಾಜದ ಅಭಿವೃದ್ಧಿ, ಯುವಜನರ ಸಂಘಟನೆ ಮತ್ತು ಮುಂದಿನ ಯೋಜನೆಗಳ ಕುರಿತು ಚರ್ಚೆ ನಡೆಯಿತು.


Share with

Leave a Reply

Your email address will not be published. Required fields are marked *