ಉತ್ತರ ಕನ್ನಡದ ಹಲವೆಡೆ ಭಾರೀ ಮಳೆ.. ಅಲ್ಲೋಲ ಕಲ್ಲೋಲ

Share with

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಸುರಿದ ಮಳೆಗೆ ಭಾರೀ ಅವಾಂತರ ಸೃಷ್ಟಿಯಾಗಿದೆ. ಪ್ರಸಿದ್ದ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಗೆ ಮಳೆ ನೀರು ನುಗ್ಗುವ ಆತಂಕ ಎದುರಾಗಿದ್ದು, ಪ್ರಸಿದ್ದ ಆತ್ಮಲಿಂಗದ ಸ್ಪರ್ಶ ದರ್ಶನಕ್ಕೆ ಭಕ್ತರಿಗೆ ನಿರ್ಬಂಧ ಹೇರಲಾಗಿದೆ.

ಇಡೀ ಗೋಕರ್ಣದ ಬೀದಿಗಳು ಹಳ್ಳದಂತಾಗಿದ್ದು, ಮಧ್ಯಾಹ್ನ 12:30ರ ನಿತ್ಯ ಮಹಾಪೂಜೆಗೂ ಅಡ್ಡಿಯಾಗಿದೆ. ಇನ್ನು, ಕುಮಟಾ ತಾಲೂಕಿನ ವಾಲಗಳ್ಳಿ ಸಮೀಪ ಕುಮಟಾ-ಸಿದ್ದಾಪುರ ಸಂಪರ್ಕಿಸುವ ರಾಜ್ಯ ಹೆದ್ದಾರಿ ಸಂಪೂರ್ಣ ಜಲಾವೃತಗೊಂಡಿದೆ.


Share with

Leave a Reply

Your email address will not be published. Required fields are marked *