ಇರಾನಿನ ಕ್ಷಿಪಣಿ & ಡೋನ್ ಸೌಲಭ್ಯಗಳು ಹಾಗೂ ಕರಾವಳಿ ರಾಡಾರ್ ತಾಣಗಳನ್ನು ಗುರಿಯಾಗಿಸಿಕೊಂಡು ಅಮೆರಿಕದ ಸೇನೆಯು ಹಾರ್ಮುಜ್ ಜಲಸಂಧಿಯಲ್ಲಿ ಮತ್ತೊಮ್ಮೆ ವಾಯುದಾಳಿ ನಡೆಸಿದೆ. ಇರಾನ್ ಸಂಸತ್ತಿನ ಸದಸ್ಯ ಇಬ್ರಾಹಿಂ ಅಜೀಜಿ, ನಡೆಯುತ್ತಿರುವ ಮಾತುಕತೆಗಳ ನಡುವೆಯೂ ಅಮೆರಿಕವು ಮತ್ತೆ ಇರಾನ್ ಮೇಲೆ ದಾಳಿ ಮಾಡಿದೆ ಎಂದು ಎಕ್ಸ್ನಲ್ಲಿ ಬರೆದಿದ್ದಾರೆ.

ಈ ಕದನ ವಿರಾಮ ಉಲ್ಲಂಘನೆಯು ಅಮೆರಿಕಕ್ಕೆ ಹಿಮ್ಮೆಟ್ಟುವಿಕೆ ಮತ್ತು ವಿಷಾದಕ್ಕೆ ಕಾರಣವಾಗುತ್ತದೆ ಎಂದು ಅವರು ಹೇಳಿದ್ದಾರೆ.




