ತುಮಕೂರು ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆಯ ಭಾಗವಾಗಿ ಸುಮಾರು 14,000 ಬಿಪಿಎಲ್ ಕಾರ್ಡ್‌ಗಳನ್ನು ಆಹಾರ ಇಲಾಖೆ ರದ್ದುಪಡಿಸಿದೆ. ಜಿಲ್ಲೆಯ 6 ಲಕ್ಷಕ್ಕೂ ಅಧಿಕ ಪಡಿತರ ಚೀಟಿದಾರರ ಪೈಕಿ ಇವರು ಅನರ್ಹರು ಎಂದು ಪರಿಶೀಲನೆಯಲ್ಲಿ ಗುರುತಿಸಲಾಗಿದೆ.

ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರು ಹಾಗೂ ಕಾರು ಹೊಂದಿರುವವರೂ BPL ಕಾರ್ಡ್ ಪಡೆದಿರುವುದು ಪತ್ತೆಯಾಗಿದೆ. ಯೋಜನೆಗಳ ಸೌಲಭ್ಯ ನಿಜವಾದ ಫಲಾನುಭವಿಗಳಿಗೆ ತಲುಪಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ.




