ಉಪ್ಪಳ: ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ನ ಶತಮಾನೋತ್ಸವದ ಆಚರಣೆ ಹಾಗೂ ಇದರ ಅಂಗವಾಗಿ ಸ್ಥಾಪಕರ ಹೆಸರಿನಲ್ಲಿ ನಿರ್ಮಾಣಗೊಂಡಿರುವ ಎಲ್.ಆರ್ ಗುರು ಸಹಕಾರ ಸದನ ಹಾಗೂ ನೂತನ ಕೇಂದ್ರ ಕಚೇರಿಯ ಉದ್ಘಾಟನಾ ಸಮಾರಂಭ ನ.3ರಂದು ಭಾರೀ ಅದ್ದೂರಿಯಾಗಿ ನೆರವೇರಿತು.


ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ರವರು ನೂತನ ಕಟ್ಟಡದ ಉದ್ಘಾನೆಯನ್ನು ನೆರವೇರಿಸಿದರು. ಸಹಕಾರ ಬ್ಯಾಂಕ್ ಅಧಿಕಾರಿ ಚಂದ್ರನ್.ಎ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಸಚಿವೆ ಶೋಭಾ ಕರಂದ್ಲಾಜೆರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಸಹಕಾರಿ ವ್ಯವಸ್ಥೆ ಜನರಿಂದ ನಡೆಯುವ ವ್ಯವಸ್ಥೆ ಸಹಕಾರಿ ವ್ಯವಸ್ಥೆಯ ಮೇಲೆ ನಂಬಿಕೆ ಭರವಸೆಯಿದೆ ಈ ರೀತಿಯ ನಂಬಿಕೆಗಳ ಆಧಾರದಲ್ಲಿ ಸಮಾಜದ ಮುಂದೆ ಕಳೆದ 100 ರ್ಷಗಳಲ್ಲಿ ಸದ್ರೃಡವಾಗಿ ಬೆಳೆದು ಶತಮಾನೋತ್ಸವವನ್ನು ಆಚರಿಸಿರುವ ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್ ಕರ್ಯ ಸಮಾಜಕ್ಕೆ ಮಾದರಿ ಎಂದು ಅವರು ತಿಳಿಸಿದರು.

ಸಹಕಾರಿ ಕ್ಷೇತ್ರದಲ್ಲಿ ಪಾರರ್ಶಕತೆಯನ್ನು ತರುವುದಕ್ಕಾಗಿ ಕೇಂದ್ರದ ನರೇಂದ್ರ ಮೋದಿ ಸರಕಾರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅವ್ಯವಹಾರ, ಭ್ರಷ್ಟಾಚಾರ, ಮಧ್ಯರ್ತಿಗಳ ಕಾಟ ತಪ್ಪಿಸುವುದಕ್ಕಾಗಿ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ ಎಂದರು.
ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಸಹಕಾರ ಬ್ಯಾಂಕ್ ಅಧಿಕಾರಿ ಲತ.ಟಿ.ಎಂ ಸಾಲಪತ್ರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಬಡ್ಡಿ ರಹಿತ ಗೃಹ ವೈಭವ ಸಾಲಪತ್ರ ವಿತರಣೆ ನಡೆಯಿತು.
ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಅಧ್ಯಕ್ಷ ವಹಿಸಿದರು. ಧಾರ್ಮಿಕ ಮುಂದಾಳು, ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷೆ ರುಬೀನ ನೌಫಲ್, ಸಹಕಾರ ಬ್ಯಾಂಕ್ ಅಧಿಕಾರಿ ನಾಗೇಶ್.ಕೆ, ಮಂಗಲ್ಪಾಡಿ ಪಂಚಾಯತ್ ಸದಸ್ಯೆ ರೇವತಿ ಕಮಲಾಕ್ಷ, ಸುನಿಲ್ ಕುಮಾರ್.ಎ, ಸಹಕಾರ ಬ್ಯಾಂಕ್ ಅಧಿಕಾರಿ ವಿನೋದ್ ಕುಮಾರ್, ಕಾಸರಗೋಡು ಕೆ.ಸಿ.ಇ.ಎಫ್ ಅಧ್ಯಕ್ಷ ವಿನೋದ್ ಕುಮಾರ್, ಕರುಣಾಕರ ನಂಬ್ಯಾರ್, ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಬಿ.ವಿ ರಾಜನ್, ಮೊಹಮ್ಮದ್ ಹನೀಫ್, ಶಾಂತಾರಾಮ ಶೆಟ್ಟಿ, ಸುಬ್ಬಣ್ಣ ಭಟ್, ಜಯಂತ ಪಾಟಾಳಿ, ದಿನೇಶ್ ಐಲ, ವೀರಪ್ಪ ಅಂಬಾರ್, ಕೊರಗಪ್ಪ.ಎಸ್.ಶೆಟ್ಟಿ ಮೊದಲಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಾಂಶನೆ ನೀಡಿದರು.
ಈ ಸಂದರ್ಭದಲ್ಲಿ ಸಚಿವ ಶೋಭಾ ಕರಂದ್ಲಾಜೆರವರನ್ನು ಚೆರುಗೋಳಿ ನಾಗರಿಕರ ಪರವಾಗಿ ಶಾಲು, ಫಲಪುಷ್ಪ, ಸ್ಪರಣಿಕೆ ನೀಡಿ ಸನ್ಮಾನಿಸಲಾಯಿತು. ಹಾಗೂ ಬ್ಯಾಂಕ್ಗೆ ಸ್ಥಳದಾನಗೈದ ಎಲ್.ಆರ್ ಗುರು ಕುಟುಂಬದ ಸದಸ್ಯೆ ಕಾಮಿನಿ ಪ್ರಕಾಶ್, ಬ್ಯಾಂಕ್ನ ಮಾಜಿ ಅಧ್ಯಕ್ಷರುಗಳಾದ ಅಶೋಕ್ ಕುಮಾರ್ ಹೊಳ್ಳ, ಪಿ.ಟಿ ಸುಬ್ಬಣ್ಣ ಶೆಟ್ಟಿ, ನಿವೃತ್ತ ಕಾರ್ಯದರ್ಶಿಗಳಾದ ಅನಂತ ತುಂಗ, ರಾಮಚಂದ್ರ, ಕೆ.ದಿನಕರ್ ರಾವ್, ಎಂ.ಭುಜಂಗ ಶೆಟ್ಟಿ ಹಾಗೂ ನೂತನ ಕಟ್ಟಡ ನಿರ್ಮಾಣದ ಉದ್ಯೋಗಸ್ಥರಾದ ಶ್ರೀನಿವಾಸ ಪೈ, ಪ್ರಮೋದ್ ಕುಮಾರ್, ಎ.ಅನಂತಕೃಷ್ಣ ಮಯ್ಯ, ಸುದಿನ್ ಕುಮಾರ್ ಇಡಿಯವರನ್ನು ಗೌರವಿಸಲಾಯಿತು.
ನಿಶ್ಮಿತ, ಸುಶ್ಮಿತ, ಅನುಷ ಐಲ ಸಹಕಾರ ಗೀತೆಯನ್ನು ಹಾಡಿದರು. ಬ್ಯಾಂಕ್ನ ಗೌರವಾಧ್ಯಕ್ಷ ಎಂ.ಪಿ ಬಾಲಕೃಷ್ಣ ಶೆಟ್ಟಿ ಸ್ವಾಗತ ಕಾರ್ಯಕ್ರಮವನ್ನು ನಡೆಸಿದರು. ಬ್ಯಾಂಕ್ ಅಧ್ಯಕ್ಷ ಪ್ರೇಂಮಾರ್.ಕೆ.ಪಿ ಐಲ ಪ್ರಾಸ್ತಾವಿಕ ಮಾತನಾಡಿದರು. ಬ್ಯಾಂಕ್ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಪಿ. ಧನ್ಯವಾದ ನೀಡಿದರು. ಮೀರಾ ಆಳ್ವ ಮತ್ತು ಜಗದೀಶ ಪ್ರತಾಪನಗರ ನಿರೂಪಿಸಿದರು. ಕಾರ್ಯಕ್ರಮದ ಆರಂಭದಲ್ಲಿ ನಾದ ನಿನಾದ ಹಾಗೂ ಸಭಾ ಕಾರ್ಯಕ್ರಮದ ಬಳಿಕ ಶ್ರೀನಿವಾಸ ಕಲ್ಯಾಣ ಯಕ್ಷಗಾನ ಬಯಲಾಟ ನಡೆಯಿತು. ಕಾರ್ಯಕ್ರಮದ ವೇದಿಕೆ ಮುಂಭಾಗದಲ್ಲಿ ವಿವಿಧ ರಾಜಕೀಯ ನೇತಾರರು, ಧಾರ್ಮಿಕ ಮುಂದಾಳುಗಳು,ವಿವಿಧ ವಲಯಗಳ ಗಣ್ಯರು, ಊರವರ ಸಹಿತ ಸಾವಿರಾರು ಮಂದಿ ಭಾಗವಶಿಸಿದ್ದರು.




