ಉಪ್ಪಳ: ಬಂದ್ಯೋಡು ಬಳಿಯ ಕರವೂರು ನಿವಾಸಿ ಹಿರಿಯ ವ್ಯಾಪಾರಿ ವಿಠಲ ಶೆಟ್ಟಿ [68] ನಿಧನರಾದರು. ಶುಕ್ರವಾರ ರಾತ್ರಿ ಸುಮಾರು 10 ಗಂಟೆಯ ವೇಳೆ ಉಸಿರಾಟದ ತೊಂದರೆ ಉಂಟಾಗಿದ್ದು, ಬಂದ್ಯೋಡು ಆಸ್ಪತೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಕಾಸರಗೋಡು ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧರಾದರು.


ಬಂದ್ಯೋಡುನಲ್ಲಿ ನಿತ್ಯಾನಂದ ಸ್ಟೋರ್ ದಿನಸಿ ಅಂಗಡಿ ಮಾಲಕರಾಗಿದ್ದಾರೆ. ಮೃತರು ಪತ್ನಿ ಶೋಭಾ, ಮಕ್ಕಳಾದ ಸಂದೀಪ್. ಸುದೀಪ್, ಸೊಸೆಯಂದಿರಾದ ಭವ್ಯ, ಶುಭ, ಸಹೋದರ, ಸಹೋದರಿಯರಾದ ಶಂಕರ ಶೆಟ್ಟಿ, ವಿಶ್ವನಾಥ ಶೆಟ್ಟಿ, ಗಿರಿಜ, ವಸಂತಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ನಿಧನಕ್ಕೆ ಪಡ್ಯಾರ ಮನೆ ಕುಟುಂಬಸ್ಥರು ಕುಂಜತ್ತೂರು ಮಾಡ ಸಂತಾಪ ಸೂಚಿಸಿದೆ.




