ಕಾಸರಗೋಡು: ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ಕಾಸರಗೋಡಿನ ಕೊರಗ ಸಮಾಜ ಸಂಘಟನೆಗಾಗಿ ಪರಮಪೂಜ್ಯ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಡಿ.31ರಂದು “ಕೊರಗ ಸಮಾಜ ಸಂಗಮ-2023”ವನ್ನು ಆಯೋಜಿಸಲಾಗಿದೆ.


ಉಪ್ಪಳದಿಂದ ಭವ್ಯ ಶೋಭಾಯಾತ್ರೆಯಲ್ಲಿ ಸಮಾಜ ಬಾಂಧವರು ಆಗಮಿಸಲಿದ್ದು ವಿವಿಧ ಸಮುದಾಯದ ಬಂಧುಗಳು ಅವರನ್ನು ಸ್ವಾಗತಿಸಲಿದ್ದಾರೆ. ಬೆ.10.30ಕ್ಕೆ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ರಾಜ್ಯಸಭಾ ಸದಸ್ಯ ಕೆ.ನಾರಾಯಣ್ ರವರು ಸಮಾವೇಶವನ್ನು ಉದ್ಘಾಟಿಸಲಿದ್ದಾರೆ.
ಕಟೀಲಿನ ವೇದಮೂರ್ತಿ ಅನಂತಪದ್ಮನಾಭ ಆಸ್ರಣ್ಣರ ದಿವ್ಯ ಉಪಸ್ಥಿತಿಯಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್, ಜಿ.ಪಂ. ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಡಿ.ವೈ.ಎಸ್.ಪಿ ಸತೀಶ್ ಮತ್ತು ಟಿ.ಡಿ.ಓ ಮಲ್ಲಿಕಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕೊರಗ ಸಮಾಜ ಸಂಗಮ ಸಮಿತಿಯ ಅಧ್ಯಕ್ಷ ಸಂಜೀವ ಪುಳಿಕೂರು, ಜಿಲ್ಲಾ ಎಸ್.ಸಿ.ಎಸ್.ಟಿ ಮೋನಿಟರಿಂಗ್ ಕಮಿಟಿ ಸದಸ್ಯರು ಮತ್ತು ನೇತಾರರು ಉಪಸ್ಥಿತರಿರುತ್ತಾರೆ. ಮಧ್ಯಾಹ್ನ ಕೊರಗ ನೃತ್ಯದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅಪರಾಹ್ನ 3.30ರಿಂದ ಎಡನೀರು ಮಠದ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಮತ್ತು ಕೊಂಡೆವೂರು ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಕಾಸರಗೋಡು ಜಿಲ್ಲಾಧಿಕಾರಿ ಇನ್ಬಾಸೇಕರ್, ರಾ.ಸ್ವ.ಸಂ.ನ ಕುಟುಂಬ ಪ್ರಬೋಧಿನಿ ರಾಷ್ಟ್ರೀಯ ಸಮಿತಿಯ ವಿಶೇಷ ಆಹ್ವಾನಿತರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಮೈಸೂರಿನ ನ್ಯಾಯವಾದಿ ಓ.ಶ್ಯಾಮ್ ಭಟ್ ಮತ್ತು ಜೆ.ಎಸ್.ಎನ್.ಎಂ ಟ್ರಸ್ಟ್ ನ ವಿಶ್ವಸ್ಥ ಶಶಿಧರ ಶೆಟ್ಟಿ ಗ್ರಾಮಚಾವಡಿಯವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುತ್ತಾರೆ. ಕೊರಗ ಸಮಾಜ ಬಾಂಧವರು ಮಾತ್ರವಲ್ಲದೆ ಮುಖ್ಯವಾಹಿನಿಯ ಸಮಸ್ತರೂ ಜಿಲ್ಲೆಯಲ್ಲಿ ಪ್ರಥಮ ಭಾರಿಗೆ ನಡೆಯುವ ಈ ಸಮಾವೇಶದಲ್ಲಿ ಪಾಲ್ಗೊಳ್ಳಬೇಕೆಂದು ಸಂಘಟಕರು ಪ್ರಕಟಣೆಯಲ್ಲಿ ವಿನಂತಿಸಿಕೊಡಿದ್ದಾರೆ.




